ಮೂಡುಬಿದಿರೆಯ ದಿನವಹಿ ಮಾರ್ಕೆಟ್ ಕಟ್ಟಡಕ್ಕೆ ಹೈಕೋಟ್೯ನಿಂದ ಅನುಮತಿ

ಮೂಡುಬಿದಿರೆಯ ದಿನವಹಿ ಮಾರ್ಕೆಟ್ ಕಟ್ಟಡಕ್ಕೆ ಹೈಕೋಟ್೯ನಿಂದ ಅನುಮತಿ

ಮೂಡುಬಿದಿರೆ: ಕಳೆದ ಏಳು ವರ್ಷಗಳಿಂದ ವಿವಾದದಿಂದಿದ್ದ ಮೂಡುಬಿದಿರೆ ದಿನವಹಿ ಮಾರ್ಕೆಟ್ ಕಟ್ಟಡದ ಬಗ್ಗೆ ಹೈಕೋಟ್೯ ವಿಚಾರಣೆ ನಡೆದು ಕಾಮಗಾರಿಯನ್ನು ಮುಂದುವರೆಸಲು ಅನುಮತಿಯನ್ನು ನೀಡಿದೆ.

ಮೂಡುಬಿದಿರೆ ಪುರಸಭೆಯ ದಿನವಹಿ ಮಾರುಕಟ್ಟೆಯು ಹಲವು ವರ್ಷಗಳ ಹಳೆಯ
ಕಟ್ಟಡವಾಗಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಸುಮಾರು 26ಕೋಟಿ ಅಂದಾಜು ಮೊತ್ತದ
ಹೈಟೆಕ್‌ ಮಾರುಕಟ್ಟೆಯನ್ನು ಖಾಸಗಿ ಸಂಸ್ಥೆಯ ಸಹಬಾಗಿತ್ವದಲ್ಲಿ ಕಟ್ಟಡ ನಿರ್ಮಿಸಲು
ಕೆಯುಐಡಿಎಫ್‌ಸಿ ಮೂಲಕ ಟೆಂಡರ್‌ ಕರೆಯಲಾಗಿತ್ತು. ಈ ಸಂದರ್ಭ ಹಳೆ ಮಾರ್ಕೆಟ್ ನಲ್ಲಿದ್ದ ವ್ಯಾಪಾರಸ್ಥರನ್ನು ತಾತ್ಕಾಲಿಕ ನೆಲೆಯಲ್ಲಿ ಎಂಬಂತೆ ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು.
 ಹಳೆ ಮಾರ್ಕೆಟ್ ನ ಕಟ್ಟಡದ ಕಾಮಗಾರಿಯ ಶೇಕಡ 70% ಪೂರ್ಣಗೊಂಡಿದ್ದು ಕಾಮಗಾರಿಯು ನಡೆಯುತ್ತಿದ್ದಂತೆ ಪುರಾತತ್ವ ಇಲಾಖೆಯಿಂದ ನಿರಾಕ್ಷೇಪಣೆ ಪಡೆಯದಿರುವುದರಿಂದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಕೆಯಾದ ಪರಿಣಾಮ ಕಟ್ಟಡ
ಕಾಮಗಾರಿಗೆ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು.

ತಡೆಯಾಜ್ಞೆ ಇದ್ದ ಕಾರಣ ಕಟ್ಟಡ ಕಾಮಗಾರಿ ಮುಂದುವರಿಯದೆ ಸ್ಥಗಿತಗೊಂಡಿತ್ತು. ಹೈಕೋರ್ಟ್ ನಲ್ಲಿ ಈ ಬಗ್ಗೆ ಹಲವು ಬಾರಿ ವಿಚಾರಣೆ ನಡೆದು ಕೆಲವು ಹಿಯರಿಂಗ್ ಗಳಲ್ಲಿ ಅಂತಿಮ ತೀರ್ಪು ಹೊರಬೀಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಸುದೀರ್ಘ ಕಾಲದ ವಿಚಾರಣೆ ನಡೆದು ಅಂತಿಮವಾಗಿ ಮೂಡುಬಿದಿರೆ ಪುರಸಭೆಯು ಪ್ರಾಚ್ಯ ಇಲಾಖೆಗೆ ಮೂರು ವಾರಗಳಲ್ಲಿ ಕಟ್ಟಡ ಕಾಮಗಾರಿ ಮುಂದುವರಿಸಲು ಅನುಮತಿ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಬೇಕು,ಪ್ರಾಚ್ಯ ಇಲಾಖೆ ಅದಕ್ಕೆ ನಾಲ್ಕು ವಾರಗಳಲ್ಲಿ ಅನುಮತಿ ನೀಡಬೇಕೆಂದು ಹೈಕೋರ್ಟ್ ಆದೇಶಿಸಿರುವುದಾಗಿ ತಿಳಿದು ಬಂದಿದೆ.
   
ಹೈಕೋರ್ಟ್ ಈ ಆದೇಶ ನೀಡಿರುವುದರಿಂದ ಪ್ರಾಚ್ಯ ಇಲಾಖೆಯ ಅನುಮತಿ ಸಿಕ್ಕ ಬಳಿಕ ಮೂಡುಬಿದಿರೆ ಮಾರ್ಕೆಟ್ ಕಟ್ಟಡ ಕಾಮಗಾರಿ ಮತ್ತೆ ಮುಂದುವರಿಯಲಿದೆ. ಈ ಮೂಲಕ ಮೂಡುಬಿದಿರೆ ಜನತೆ ಮತ್ತೆ ಮಾರ್ಕೆಟ್ ಕಟ್ಟಡ ಕಾಮಗಾರಿ ಮುಂದುವರಿಕೆಯ ನಿರೀಕ್ಷೆಯಲ್ಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article