ಶಕ್ತಿ ವಸತಿ ಶಾಲೆಗೆ ಎಲ್ಡ್ರಾಕ್-ಇಂಡಿಯಾ ಕೆ 12 ಸ್ಕೂಲ್ ಪ್ರಶಸ್ತಿ
Saturday, September 28, 2024
ಮಂಗಳೂರು: ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಅವರು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯಲ್ಲಿನ ಶ್ರೇಷ್ಠತೆಗಾಗಿ ಶಕ್ತಿ ವಸತಿ ಶಾಲೆಗೆ ‘ಇಂಡಿಯಾ ಕೆ 12 ಸ್ಕೂಲ್ ಅವಾರ್ಡ್’ ಎಂಬ ಮಾನ್ಯತೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಅವರು ಸೆಪ್ಟೆಂಬರ್ 25 ಮತ್ತು 26 ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಡೆದ ಶೈಕ್ಷಣಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದರು, ಇದರಲ್ಲಿ ಭಾರತದಾದ್ಯಂತ ನೂರಾರು ಪ್ರಾಂಶುಪಾಲರು ಮತ್ತು ನಿರ್ದೇಶಕರು ಮತ್ತು ಪ್ಯಾನೆಲ್ ಡಿಸ್ಕನ್ಗಳಲ್ಲಿ ಖ್ಯಾತ ಶಿಕ್ಷಣತಜ್ಞರು ಭಾಗವಹಿಸಿದ್ದರು. ಎಲ್ಡ್ರಾಕ್ ಭಾರತದ ಪ್ರಮುಖ ಬಿ2ಬಿ ಕಾನ್ಫರೆನ್ಸ್ ಮತ್ತು ಪ್ರದರ್ಶನಗಳ ಕಂಪನಿಯಾಗಿದ್ದು, ಶಿಕ್ಷಣ ಕ್ಷೇತ್ರಗಳಿಗೆ ಮೀಸಲಾಗಿರುತ್ತದೆ. ಬಬಿತಾ ಸೂರಜ್ ಅವರು ವಿವಿಧ ಶಿಕ್ಷಣ ಕ್ಷೇತ್ರಗಳ ಜನಪ್ರಿಯ ಶಿಕ್ಷಣತಜ್ಞರು ಪ್ರಾರಂಭಿಸಿದ ಪ್ಯಾನೆಲ್ ಚರ್ಚೆಗಳಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಯ್ಕ್, ಕಾರ್ಯದರ್ಶಿ ಸಂಜಿತ್ ನಾಯ್ಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಹೆಚ್. ಮತ್ತು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದರು.