ಸಾಹಿತ್ಯದ ಓದಿನಿಂದ ವಿಕಸನದ ಸಿದ್ಧಿ: ರಾಜೇಂದ್ರ ಭಟ್ ಕೆ.

ಸಾಹಿತ್ಯದ ಓದಿನಿಂದ ವಿಕಸನದ ಸಿದ್ಧಿ: ರಾಜೇಂದ್ರ ಭಟ್ ಕೆ.


ಕಾರ್ಕಳ: ಸಾಹಿತ್ಯದ ಓದಿನಿಂದ ನಮ್ಮ ಭಾಷೆ ಶುದ್ಧವಾಗುವುದರಿಂದ ಸಂವಹನ ಸುಲಭವಾಗುತ್ತದೆ. ಅಕಾಡೆಮಿಕ್ ಕಲಿಕೆಯು ವೇಗ ಪಡೆಯುತ್ತದೆ. ಮೌಲ್ಯಗಳು ಅಂತರ್ಗತ ಆಗುತ್ತವೆ ಮತ್ತು ವ್ಯಕ್ತಿತ್ವದ ವಿಕಸನವೂ ಖಾತರಿ ಆಗುತ್ತದೆ. ಅದರಿಂದ ವಿದ್ಯಾರ್ಥಿಗಳು ತುಂಬಾ ಓದುವುದು ಮತ್ತು ಬರೆಯುವುದು ಅಗತ್ಯ ಎಂದು ಶಿಕ್ಷಕರೂ, ವಿಕಸನದ ರಾಷ್ಟ್ರಮಟ್ಟದ ತರಬೇತುದಾರರೂ  ಆದ ರಾಜೇಂದ್ರ ಭಟ್ ಕೆ. ಅವರು ಅಭಿಪ್ರಾಯಪಟ್ಟರು. 

ಅವರು ಕಾರ್ಕಳದ ಎಸ್ ವಿ ಟಿ ಮಹಿಳಾ ಪದವಿ ಕಾಲೇಜಿನ ಸಾಹಿತ್ಯಸಂಘವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಮುಂದೆ ಅವರು ವಿದ್ಯಾರ್ಥಿನಿಯರ ಜೊತೆಗೆ 'ಸಾಹಿತ್ಯದ ವಿವಿಧ  ಆಯಾಮಗಳು' ಎಂಬ ವಿಷಯದ ಮೇಲೆ ಸಂವಾದ ಮಾಡಿದರು.

ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಉಷಾ ನಾಯಕ್ ಅವರು ಅಧ್ಯಕ್ಷತೆ ವಹಿಸಿ ಬದುಕಿಗೆ ಅರ್ಥ ನೀಡುವ ಸಾಹಿತ್ಯದ ಓದು ಇಂದಿನ ಅಗತ್ಯ ಎಂದು ಹೇಳಿದರು.

ಸಾಹಿತ್ಯ ಸಂಘದ ನಿರ್ದೇಶಕಿ ವಿನುತ ಕಾಮತ್ ಅವರು ಅತಿಥಿಗಳನ್ನು ಪರಿಚಯ ಮಾಡಿ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿ ನಾಯಕರಾದ ಶ್ರೇಯಾ ಮತ್ತು ರಕ್ಷಾ ವೇದಿಕೆಯಲ್ಲಿದ್ದರು. ಮಂಜುಳಾ ಕಾರ್ಯಕ್ರಮ ನಿರೂಪಣೆ ಮಾಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article