ಅ.14 ರಿಂದ ನಗರದಲ್ಲಿ ರಿಕ್ಷಾಚಾಲಕರಿಂದ ಅನಿರ್ದಿಷ್ಟವಾಧಿ ಧರಣಿ ಸತ್ಯಾಗ್ರಹ
Wednesday, September 25, 2024
ಮಂಗಳೂರು: ಮೋಟಾರು ವಾಹನ ಕಾಯ್ದೆಯ ವಿರುದ್ಧವಾಗಿ ಕಾನೂನು ನಿಯಮಗಳನ್ನು ಬದಿಗಿರಿಸಿ, ನಗರದಲ್ಲಿ ಪರವಾನಿಗೆ ರಹಿತ ಬ್ಯಾಟರಿ ಚಾಲಿತ ಆಟೋರಿಕ್ಷಾಗಳಿಗೆ ಬೇಕಾಬಿಟ್ಟಿ ಅವಕಾಶ ನೀಡಿದ ಜಿಲ್ಲಾ ಸಾರಿಗೆ ಪ್ರಾಧಿಕಾರದ ದೋರಣೆಯಿಂದ ನಗರದಲ್ಲಿ ಪರವಾನಿಗೆ ಪಡೆದ ರಿಕ್ಷಾ ಚಾಲಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಓತ್ತಾಯಿಸಿ ಅ.14 ರಿಂದ ಸಾರಿಗೆ ಕಚೇರಿಯ ಮುಂಬಾಗ ಆನಿರ್ಧಿಪ್ಟವಾದಿ ಧರಣಿ ನಡೆಸಲಾಗುವುದು ಎಂದು ಸಮಿತಿಯಲ್ಲಿ ತೀರ್ಮಾನಿಸಲಾಯಿತು.
ಇಂದು ದ.ಕ. ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘ ಮತ್ತು ಸಮಾನ ಮನಸ್ಕರ ವೇದಿಕೆಯ ಆಶ್ರಯದಲ್ಲಿ ನಗರದ ಪೊಲೀಸ್ ಲೈನ್‌ನಲ್ಲಿರುವ ನಾಸಿಕ್ ಬಿ.ಎಚ್. ಬಂಗೇರ ಸಭಾಭವನದಲ್ಲಿ ನಡೆದ ರಿಕ್ಷಾ ಚಾಲಕರ ವಿವಿಧ ಪಾರ್ಕ್ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಬಿ. ವಿಷ್ಣುಮೂರ್ತಿ ವಹಿಸಿದ್ದರು. ಸಮಾನ ಮನಸ್ಕರ ವೇದಿಕೆಯ ದಯಾನಂದ ಶೆಟ್ಟಿ ಪ್ರಸ್ತಾಪಿದರು. ಮೋಹನ ಕೆ.ಜಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿವಿಧ ಪಾರ್ಕ್ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.
