ಎನ್‌ಡಿಎ ಪ್ರವೇಶ ಪರೀಕ್ಷೆ: ಎಕ್ಸ್‌ಪರ್ಟ್‌ನ 20 ವಿದ್ಯಾರ್ಥಿಗಳು ತೇರ್ಗಡೆ

ಎನ್‌ಡಿಎ ಪ್ರವೇಶ ಪರೀಕ್ಷೆ: ಎಕ್ಸ್‌ಪರ್ಟ್‌ನ 20 ವಿದ್ಯಾರ್ಥಿಗಳು ತೇರ್ಗಡೆ


ಮಂಗಳೂರು: ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ 20 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇದೊಂದು ರಾಷ್ಟ್ರಮಟ್ಟದ ಅಭೂತಪೂರ್ವ ಸಾಧನೆಯಾಗಿದೆ.

ಆಶಿಶ್ ಸಿದ್ದಣ್ಣ ಹಾವನ್ನವರ್, ಭುವನ್ ಜಿ., ಚಂದ್ರಹಾಸ ಪ್ರಾಂಜಲ್ ಎಸ್.ಜಿ., ಧೀರೆನ್ ಎ.ಶೆಟ್ಟಿ, ಗೋಕುಲ್ ಜಿ.ಎಸ್., ಕರಣ್ ನೇಕರ್, ಕ್ರಿಶ್ ಎಸ್., ಕುಶಾಲ್ ಹಟ್ಟಿ, ಲಕ್ಷ್ಯ ಎಲ್. ಪೂಜಾರ್, ಮನ್ವಿತ್ ಎಸ್., ನಿಖಿಲ್ ಸೊನ್ನದ್, ಪೂಜಾ, ಪ್ರಜ್ವಲ್ ಭಟ್, ಪ್ರಣವ್ ಎಂ.ಮಾರಮನ್ನವರ್, ಪ್ರಣವ್ ಎಂ.ಪಿ., ಪ್ರೀತಂ ಸೋಮಶೇಖರ್ ಕೋರಿ, ರೋಹನ್ ಜಿ., ಎಸ್.ಪಿ.ದುಶ್ಯಂತ್ ಜೈನ್, ಸಾಯಿಶ್ ಶ್ರವಣ ಪಂಡಿತ್, ಶುಭಿತ್ ದಂಡಮುಡಿ ತೇರ್ಗಡೆಯಾದ ವಿದ್ಯಾರ್ಥಿಗಳು.

ಕೇಂದ್ರ ಲೋಕಸವಾ ಆಯೋಗವು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಇಂಡಿಯನ್ ನೇವಲ್ ಅಕಾಡೆಮಿ ಪ್ರವೇಶಕ್ಕಾಗಿ ವರ್ಷಕ್ಕೆ ಎರಡು ಬಾರಿ ಪ್ರವೇಶ ಪರೀಕ್ಷೆ ನಡೆಸುತ್ತದೆ. ಎನ್‌ಡಿಎ ಪರೀಕ್ಷೆಯು ಭಾರತೀಯ ಸೇನೆ, ನೌಕಾಪಡೆ, ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಪ್ರವೇಶ ಬಾಗಿಲಿನಂತೆ ಕಾರ್ಯ ನಿರ್ವಹಿಸುತ್ತದೆ.

ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ಸಂಸ್ಥೆಯೊಂದರ 20 ವಿದ್ಯಾರ್ಥಿಗಳು ತೇರ್ಗಡೆಯಾಗುವುದು ಅಭೂತಪೂರ್ವ ಸಾಧನೆಯಾಗಿದೆ. ಈ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article