ಕ.ವಿ.ಪ್ರ.ನಿ.ನಿ ನೌಕರರ ಸಹಕಾರ ಸಂಘ ನಿಯಮಿತ(ರಿ) ಮಂಗಳೂರು ಸದಸ್ಯರಿಗೆ ಶೇ.9 ಡಿವಿಡೆಂಡ್, 76.21 ಲಕ್ಷ ರೂ. ಲಾಭ

ಕ.ವಿ.ಪ್ರ.ನಿ.ನಿ ನೌಕರರ ಸಹಕಾರ ಸಂಘ ನಿಯಮಿತ(ರಿ) ಮಂಗಳೂರು ಸದಸ್ಯರಿಗೆ ಶೇ.9 ಡಿವಿಡೆಂಡ್, 76.21 ಲಕ್ಷ ರೂ. ಲಾಭ


ಮಂಗಳೂರು: ಆರ್ಥಿಕ ವರ್ಷ 2023-24ನೇ ಸಾಲಿನಲ್ಲಿ 76.21 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.9 ರಷ್ಟು ಡಿವಿಡೆಂಡ್ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಹರೀಶ್ ತಿಳಿಸಿದ್ದಾರೆ.

ನಗರದ ಮ.ವಿ.ಸ.ಕಂ.ಯ ಅತ್ತಾವರ ಆವರಣದಲ್ಲಿ ಸೆ.22 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಹಕಾರ ಸಂಘ ನಿಯಮಿತ (ರಿ), ಇದರ ೫೮ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘ 1080 ಸದಸ್ಯರನ್ನು ಹೊಂದಿದ್ದು, ಕಳೆದ ವರ್ಷಾಂತ್ಯಕ್ಕೆ ಠೇವಣಿ 10.55 ಕೋಟಿ ರೂ.ನಿಂದ ವರದಿ ವರ್ಷದಲ್ಲಿ 11.99 ಕೋಟಿ ರೂ.ಗೆ ಏರಿದೆ. ಸಾಲ ಮುಂಗಡದಲ್ಲೂ ಏರಿಕೆಯಾಗಿದ್ದು, 11.01 ಕೋಟಿ ರೂ.ನಿಂದ 12.97 ಕೋಟಿ ರೂ.ಗೆ ಹೆಚ್ಚಳವಾಗಿದೆ. ಸಂಘದ ಒಟ್ಟು ವ್ಯವಹಾರ 26.30 ಕೋಟಿ ರೂ.ನಿಂದ 29.77 ಕೋಟಿ ರೂ.ಗೆ ಎರಿಕೆಯಾಗಿದೆ ಎಂದರು. 

ಈ ಸಂದರ್ಭದಲ್ಲಿ ಕವಿಪ್ರನಿನಿ ಸಹಕಾರ ಆಪ್‌ನ್ನು ಬಿಡುಗಡೆಗೊಳಿಸಿದರು. 

2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ, ಪಿಯುಸಿ ಹಾಗೂ ಪದವಿ/ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಅಧಿಕ ಅಂಕಗಳೊಂದಿಗೆ ತೇರ್ಗಡೆಯಾದ ಸಂಘದ ಸದಸ್ಯರ 28 ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರೋತ್ಸಾಹಧನ ನೀಡಲಾಯಿತು. ಅಲ್ಲದೇ ಸಂಘದ ಅಧ್ಯಕ್ಷ ಹರೀಶ ಅವರು ವೃತ್ತಿಯಲ್ಲಿ ನಿವೃತ್ತಿ ಹೊಂದಿರುವುದರಿಂದ ಸಹಕಾರ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು.

ನಿರ್ದೇಶಕರಾದ ಹರೀಶ್, ಶಾಂತಾನಂದ ಶೆಟ್ಟಿ, ಕರುಣಾಕರ ಶೆಟ್ಟಿ, ಲೋಕೇಶ ಪೂಜಾರಿ, ಪುತ್ತು ಜೆ, ಆಶಾ, ಹೆಚ್.ಎಸ್. ಗುರುಮೂರ್ತಿ, ಪರಮೇಶ್ವರ ಹೆಗಡೆ, ಯೋಗೀಶ್ ಎಂ., ರಾಮಚಂದ್ರ, ಪುಷ್ಪರಾಜ್ ಕೆ., ಜಾನ್ ಬ್ಯಾಪ್ಟಿಸ್ಟ್ ಡಿ’ಸೋಜ್, ರಾಜೇಶ ಬಿ. ಹಾಗೂ ವನಿತಾ ಕೆ. ಇವರುಗಳು, ಸಿಬ್ಬಂದಿ ವರ್ಗ ಹಾಗೂ ಸಹಕಾರ ಸಂಘದ ಸದಸ್ಯರು ಉಪಸ್ಥಿತರಿದ್ದರು. 

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಂತಾನಂದ ಶೆಟ್ಟಿ ವಾರ್ಷಿಕ ವರಧಿ ಹಾಗೂ ಲೆಕ್ಕಪತ್ರ ಮಂಡಿಸಿದರು.

ಸಹಕಾರ ಸಂಘದ ಸದಸ್ಯರಾದ ಕರಿಬಸಪ್ಪ ಇವರು ನಿರೂಪಿಸಿದರು. ರಾಜೇಶ ಬಿ. ಇವರು ಸ್ವಾಗತಿಸಿ, ಪರಮೇಶ್ವರ ಹೆಗಡೆ ಇವರು ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸುವ ಬಗ್ಗೆ ವರದಿ ಓದಿ, ಕರುಣಾಕರ ಶೆಟ್ಟಿ ಇವರು ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article