ಶಕ್ತಿ ವಸತಿ ಶಾಲೆಯಲ್ಲಿ ಎರಡು ದಿನಗಳ ಸಿಬಿಎಸ್‌ಇ ಕಾರ್ಯಗಾರ

ಶಕ್ತಿ ವಸತಿ ಶಾಲೆಯಲ್ಲಿ ಎರಡು ದಿನಗಳ ಸಿಬಿಎಸ್‌ಇ ಕಾರ್ಯಗಾರ


ಮಂಗಳೂರು: ಸಿಬಿಎಸ್‌ಎ ಸಿಇಒ ಬೆಂಗಳೂರು ಹಾಗೂ ಶಕ್ತಿ ವಸತಿ ಶಾಲೆಯ ಜಂಟಿ ಆಶ್ರಯದಲ್ಲಿ ‘ಸಮಾಜಶಾಸ್ತ್ರದ ಸಾಮರ್ಥ್ಯ ಆಧಾರಿತ ಮೌಲ್ಯಮಾಪನ’ ವಿಷಯದ ಕುರಿತು 2 ದಿನಗಳ ಸಿಬಿಎಸ್‌ಇ ಅಧ್ಯಾಪಕರಿಗೆ ಕಾರ್ಯಗಾರವು ಇಂದು ರಂದು ಉದ್ಘಾಟನೆಗೊಂಡಿತು. 

ಉದ್ಘಾಟನೆಯನ್ನು ಕಾರ್ಯಗಾರದ ಸಂಪನ್ಮೂಲ ವ್ಯಕ್ತಿ ರವಿಶಂಕರ್, ಮಂಗಳೂರಿನ ವಿದ್ಯಾ ಮಂದಿರದ ಪ್ರಾಂಶುಪಾಲ ಸುರೇಶ ಮಹಾಲಿಂಗಪುರ್ ಇವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್ ಮಂಗಳೂರಿನ ಪ್ರಾಂಶುಪಾಲೆ ಶೀಲ ಬಾಲಮುರಳಿ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತ ಸೂರಜ್ ಉಪಸ್ಥಿತರಿದ್ದರು. 

ಈ ಕಾರ್ಯಗಾರವು ಸೆ.9 ಮತ್ತು 10 ರಂದು ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ರೇಷ್ಮ ಮೆಮೊರಿಯಲ್ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಗಾರದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಸಿಬಿಎಸ್‌ಇ ಶಾಲೆಗಳಿಂದ 60 ಶಿಕ್ಷಕರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಸ್ಮಿಶಾ ವಿನಿಲ್ ನಿರೂಪಿಸಿದರು.









Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article