ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಗೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುವ ಹಿಂದೂ ಮಹಾಗಣಪತಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ನಿರ್ಬಂಧ: ಬಜರಂಗದಳ ಖಂಡನೆ

ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಗೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುವ ಹಿಂದೂ ಮಹಾಗಣಪತಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ನಿರ್ಬಂಧ: ಬಜರಂಗದಳ ಖಂಡನೆ

ಮಂಗಳೂರು: ವಿಶ್ವ ಹಿಂದೂ ಪರಿಷದ್ ಹಿಂದೂ ಮಹಾಗಣಪತಿ ಮಹೋತ್ಸವ ಪ್ರಯುಕ್ತ ನಾಳೆ ನಡೆಯಲಿದ್ದ ಧಾರ್ಮಿಕ  ಕಾರ್ಯಕ್ರಮದಲ್ಲಿ ಪ್ರಾಂತ ಕಾರ್ಯದರ್ಶಿ ಶರಣ್ ಪಂಪುವೆಲ್ ಭಾಗವಹಿಸಬೇಕಾಗಿತ್ತು, ಆದರೆ  ರಾಜ್ಯಸರಕಾರದ ಹಿಂದೂ ವಿರೋಧಿ ನೀತಿಯಿಂದಾಗಿ ಅವರನ್ನು ಚಿತ್ರದುರ್ಗ ಪ್ರವೇಶಿಸದಂತೆ ನಿರ್ಬಂಧ ಹಾಕಿದ್ದು ಅಲ್ಲದೆ, ಪ್ರವೇಶಕ್ಕೆ ತಡೆಯೋಡ್ಡಿದ್ದಾರೆ.  ರಾಜ್ಯ ಸರಕಾರದ ಕೈಗೊಂಬೆಯಂತೆ ವರ್ತಿಸುವ ಜಿಲ್ಲಾಡಳಿತದ ಈ ಕ್ರಮವನ್ನು ಖಂಡನೆ ಮಾಡುತ್ತೇವೆ. 

ಕರ್ನಾಟಕ ರಾಜ್ಯದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ  ಬಂದ ನಂತರ ಹಿಂದೂ ಸಂಘಟನೆಯ ಕಾರ್ಯಕರ್ತರ, ನಾಯಕರ ಮೇಲೆ ಸುಳ್ಳು ಕೇಸು ಹಾಕಿ ಅವರನ್ನು ಧಮನಿಸುವ ಕೆಲಸ ನಡೆಯುತ್ತಿದೆ. ವಿಶ್ವ ಹಿಂದೂ ಪರಿಷದ್ ಧಾರ್ಮಿಕ ಸಾಮಾಜಿಕ, ಸೇವಾ ಕಾರ್ಯಗಳ ಜೊತೆಗೆ ರಾಷ್ಟ್ರ ವಿರೋಧಿ ಕೃತ್ಯಗಳ, ಹಿಂದೂ ವಿರೋಧಿ ಕೃತ್ಯಗಳ ವಿರುದ್ಧ ನಿರಂತರ ಕೆಲಸವನ್ನು ಮಾಡಿಕೊಂಡು ಬರುತ್ತಿದೆ.  

ಮುಸ್ಲಿಂ ಓಲೈಕೆಗೋಸ್ಕರ ಈ ರೀತಿಯ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಬಜರಂಗದಳ ಬಲವಾಗಿ ಖಂಡಿಸುತ್ತದೆ. 

ತಕ್ಷಣ ಶರಣ್ ಪಂಪುವೆಲ್ ಅವರ ಮೇಲೆ ಹಾಕಿರುವ ನಿರ್ಬಂಧವನ್ನು ವಾಪಸು ಪಡೆಯಬೇಕೆಂದು ಪ್ರಾಂತ ಬಜರಂಗದಳ ಸಹ ಸಂಯೋಜಕ ಭುಜಂಗ ಕುಲಾಲ್ ಪ್ರಕಟಣೆಯಲ್ಲಿ ಅಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article