ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ: ಬೆಳುವಾಯಿಯಲ್ಲಿ ಸ್ವಚ್ಛತಾ ಶ್ರಮದಾನ
Saturday, September 21, 2024
ಮೂಡುಬಿದಿರೆ: "ಸ್ವಚ್ಛತಾ ಹೀ ಸೇವಾ" ಆಂದೋಲನ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ "ಸ್ವಚ್ಚತೆಯೆಡೆಗೆ ದಿಟ್ಟ ಹೆಜ್ಜೆ" ಅಭಿಯಾನದಡಿ ಸ್ವಚ್ಚತಾ ಶ್ರಮದಾನ ಕಾರ್ಯಕ್ರಮವು ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆಲಕುಂಜ 5 ಸೆನ್ಸ್ ಗುಂಡುಕಲ್ಲು ರಸ್ತೆ, ದಡ್ಡು ರಸ್ತೆ ಹಾಗೂ ಕುಕ್ಕುಡೇಲು ಅಯ್ಯಪ್ಪ ಮಂದಿರ ರಸ್ತೆ ಬಳಿ ಶನಿವಾರ ನಡೆಯಿತು.
ಪಂಚಾಯತ್ ಅಧ್ಯಕ್ಷ ಸುರೇಶ್ ಕೆ ಪೂಜಾರಿ, ಉಪಾಧ್ಯಕ್ಷೆ ಜಯಂತಿ, ಸದಸ್ಯರಾದ ಪಣಿರಾಜ್ ಬಲಿಪ, ಸುಶೀಲಾ, ರಘು, ಪ್ರವೀಣ್ ಮಸ್ಕರೇನಸ್, ಶೇಕ್ ಶಹಬಾದ್ ಅಹ್ಮದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿ ಭೀಮ ನಾಯಕ ಬಿ, ಪಂಚಾಯತ್ ಸಿಬ್ಬಂದಿಗಳು, ಹಾಗೂ ಗ್ರಾಮಸ್ಥರು ಸ್ವಚ್ಛತಾ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
