ಮುಡಾ ಹಗರಣ-ಸಾಮಾಜಿಕ ಕಾರ್ಯಕರ್ತರ ಹೋರಾಟಕ್ಕೆ ಸಿಕ್ಕ ನ್ಯಾಯ: ಸತೀಶ್ ಕುಂಪಲ
Tuesday, September 24, 2024
ಮಂಗಳೂರು: ಮುಡಾ ಹಗರಣದ ಬ್ರಹ್ಮಾಂಡ ಭೃಷ್ಟಾಚಾರದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮೇಲಿನ ದೂರನ್ನು ಅಭಿಯೋಜನೆಗೆ ನೀಡಿರುವ ರಾಜ್ಯಪಾಲರ ಕ್ರಮ ಸಮರ್ಥನೀಯವಾಗಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಇದು ಪ್ರತಿಪಕ್ಷದ ಮತ್ತು ಸಾಮಾಜಿಕ ಕಾರ್ಯಕರ್ತರ ಹೋರಾಟಕ್ಕೆ ಸಿಕ್ಕ ನ್ಯಾಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸತೀಶ್ ಕುಂಪಲ ಹರ್ಷ ವ್ಯಕ್ತಪಡಿಸಿದ್ದಾರೆ.
ವಿವಿಧ ಕುಟಿಲ ತಂತ್ರಗಳನ್ನು ಪ್ರಯೋಗಿಸಿದ ಸಿದ್ದರಾಮಯ್ಯ ರವರಿಗೆ ಹೈಕೋರ್ಟ್ ಶಾಕ್ ನೀಡಿದೆ. ತಾನು ಕ್ಲೀನ್ ಕ್ಲೀನ್ ಎನ್ನುತ್ತಾ ವೈಟ್ನರ್ ಮೂಲಕ ತನ್ನನ್ನು ಶುದ್ದ ಮಾಡಲು ಹೊರಟ ಸಿದ್ದರಾಮಯ್ಯರವರ ಮುಖವಾಡ ಕೋರ್ಟ್ ಆದೇಶದಿಂದ ಕಳಚಿ ಬಿದ್ದಿದೆ. ತಾನು ಯಾರಿಗೂ ಜಗ್ಗಲ್ಲ, ಬಗ್ಗಲ್ಲ ಎಂದು ಮೊಂಡುತನ ಪ್ರದರ್ಶಿಸಿದ ಅವರು ನ್ಯಾಯಾಲಯದ ತೀರ್ಮಾನಕ್ಕಾದರೂ ತಲೆ ಬಾಗಿ, ತಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ,. ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಎತ್ತಿ ಹಿಡಿಯಲಿ ಎಂದವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.