ಅಂಚೆ ಕಾರ್ಡಿನಲ್ಲಿ ಡಾ. ಕೋಟ ಶಿವರಾಮ ಕಾರಂತರ ಚಿತ್ರ ರಚನಾ ಸ್ಪರ್ಧೆ
ಮಂಗಳೂರು: ಕಲ್ಕೂರ ಪ್ರತಿಷ್ಠಾನ (ರಿ) ಮಂಗಳೂರು ಇದರ ಆಶ್ರಯದಲ್ಲಿ ಅ.10 ರಂದು ಡಾ. ಕೋಟ ಶಿವರಾಮ ಕಾರಂತರ ‘ಜನ್ಮದಿನೋತ್ಸವ-ಹುಟ್ಟುಹಬ್ಬದ’ ಸಮಾರಂಭವು ಜರಗಲಿದ್ದು, ಇದರ ಸಲುವಾಗಿ ಅಂಚೆ ಕಾರ್ಡಿನಲ್ಲಿ ಕಾರಂತರ ಚಿತ್ರ ರಚನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಎಸ್.ಎಸ್.ಎಲ್.ಸಿ.ವರೆಗಿನ ವಿಭಾಗ ಮತ್ತು ಮುಕ್ತ ವಿಭಾಗ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗುವುದು. ಪೆನ್ಸಿಲ್ನಿಂದ ‘ಕಪ್ಪು-ಬಿಳುಪು’ ಚಿತ್ರಗಳನ್ನು ಮಾತ್ರ ರಚಿಸಬೇಕು. ಇದು ರಾಜ್ಯ ಮಟ್ಟದ ಸ್ಪರ್ಧೆಯಾಗಿದ್ದು, ವಿಜೇತರಿಗೆ ಬಹುಮಾನವನ್ನು ಅಕ್ಟೋಬರ್ 10ರಂದು ಮಂಗಳೂರಿನಲ್ಲಿ ಜರಗಲಿರುವ ಸಮಾರಂಭದಲ್ಲಿ ವಿತರಿಸಲಾಗುವುದು.
ಅಕ್ಟೋಬರ್ 6ರೊಳಗಾಗಿ ಅಂಚೆ ಕಾರ್ಡ್ಗಳನ್ನು ಸ್ವ-ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ, ಜಾನ್ಚಂದ್ರನ್ (ಸಂಚಾಲಕರು), ಅಂಚೆ ಕಾರ್ಡಿನಲ್ಲಿ ಚಿತ್ರ ರಚನಾ ಸ್ಪರ್ಧಾ ವಿಭಾಗ, ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್ಬೈಲ್, ಮಂಗಳೂರು ಈ ವಿಳಾಸಕ್ಕೆ ತಲುಪುವಂತೆ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.