ಎನ್‌ಡಿಎ ಪರೀಕ್ಷೆಯಲ್ಲಿ ಆಳ್ವಾಸ್‌ನ 12 ವಿದ್ಯಾರ್ಥಿಗಳು ಉತ್ತೀರ್ಣ
Tuesday, September 24, 2024
ಮೂಡುಬಿದಿರೆ: ಯುಪಿಎಸ್‌ಸಿ ಮೂಲಕ 2024 ರ ಸೆಪ್ಟೆಂಬರ್‌ನಲ್ಲಿ ನಡೆದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಯಲ್ಲಿ ಆಳ್ವಾಸ್ ಪ.ಪೂ. ಕಾಲೇಜಿನ 12 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಪುನರ್ವ, ಸುಮನ್ ಭಟ್, ದುಷ್ಯಂತ್, ಆದಿತ್ಯ, ಅಖಿಲ್ ಜೆ.ಎಚ್., ನಿಖಿಲ್ ಭಟ್, ವಿಶ್ವವಿಜಿತ್, ವೈಭವ್, ರೋಶನ್ ಶೆಟ್ಟಿ, ದಿಗಂತ್, ಸಿದ್ಧಾಂತ್ ಮಠಪತಿ ಮತ್ತು ಆಕಾಶ್ ಪೂಜಾರ್ ಅವರು ಈ ಸಾಧನೆ ಮಾಡಿದ ವಿದ್ಯಾರ್ಥಿಗಳು.
ಎನ್‌ಡಿಎ ಪರೀಕ್ಷೆ ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರವರು ಅಭಿನಂದಿಸಿದ್ದಾರೆ.









