ನೀರು ತುಂಬಿದ್ದ ಬಕೆಟ್‌ನೊಳಗೆ ಬಿದ್ದು ಪುಟಾಣಿ ಸಾವು
Monday, September 23, 2024
ಮಂಜೇಶ್ವರ: ನೀರು ತುಂಬಿದ್ದ ಬಕೆಟ್‌ನೊಳಗೆ ಬಿದ್ದು ಒಂದು ವರ್ಷದ ಮಗು ಮೃತಪಟ್ಟ ಘಟನೆ ಹೊಸಂಗಡಿ ಬಳಿಯ ಕಡಂಬಾರ್‌ನಲ್ಲಿ ನಡೆದಿದೆ.
ಕಡಂಬಾರ್‌ನ ಕೆ.ಎ. ಹಾರಿಸ್, ಖೈರುನ್ನಿಸಾ ದಂಪತಿ ಪುತ್ರಿ ಫಾತಿಮಾ (1) ಮೃತಪಟ್ಟ ಮಗು.
ಮನೆಯೊಳಗೆ ಆಟವಾಡುತ್ತಿದ್ದ ಮಗು ಸ್ವಲ್ಪ ಹೊತ್ತಿನ ಬಳಿಕ ಶೌಚಾಲಯದಲ್ಲಿ ನೀರು ತುಂಬಿದ್ದ ಬಕೆಟ್‌ನಲ್ಲಿ ಬಿದ್ದಿರುವುದು ಕಂಡುಬಂದಿದೆ. ಮನೆಯವರು ಗಮನಿಸಿ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಗಲೇ ಮಗು ಮೃತಪಟ್ಟಿದೆ.
ಘಟನೆ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.