ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಶ್ಯಾಮು ಬಾಯಿ (90) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಮುಂಜಾನೆ ನಿಧನ ಹೊಂದಿದರು.
ಅಶ್ವತ್ಥಪುರ ಕಡ್ಪಗುರಿಯ ನಿವಾಸಿಯಾಗಿರುವ ಅವರು 6 ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಶ್ಯಾಮು ಬಾಯಿ ಅವರು ಕಂಬಳದ ವೇಗದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡರ ಅಜ್ಜಿಯಾಗಿದ್ದಾರೆ.