ಚುನಾವಣೆ ಹಿನ್ನಲೆ-ಕಾರಂತಜನ್ಮದಿನೋತ್ಸವ ಮುಂದೂಡಿಕೆ
Sunday, September 29, 2024
ಪುತ್ತೂರು: ಉಪಚುನಾವಣೆ ಹಿನ್ನಲೆಯಲ್ಲಿ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಅ.10 ರಂದು ನಡೆಯಲಿರುವ ಕಾರಂತರ 123ನೇ ಜನ್ಮ ದಿನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿದೆ.
ಈಗಾಗಲೇ ವಿಧಾನ ಪರಿಷತ್ ಉಪಚುನಾವಣೆ ಘೋಷಣೆಯಾಗಿದ್ದು, ಈ ಕುರಿತು ನೀತಿಸಂಹಿತೆ ಸೆ.19 ರಿಂದ ಅ.28 ರ ತನಕ ಜಾರಿಯಲ್ಲಿರುವುದರಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಸಭೆ ನಡೆಸಿ ನಿಗದಿಪಡಿಸಲಾಗುವುದು.
ಕಾರಂತರ ಜನ್ಮದಿನೋತ್ಸವ ನಡೆಸುವ ಕುರಿತು ಸೆ.18 ರಂದು ಪೂರ್ವಭಾವಿ ಸಭೆ ನಡೆಸಿ ಅ.10 ರಂದು ನಡೆಸಲುದ್ದೇಶಿಸಲಾಗಿತ್ತು. ಇದೀಗ ಮುಂದೂಡಲ್ಪಟ್ಟಿದೆ ಎಂದು ಡಾ.ಶಿವರಾಮ ಕಾರಂತ ಬಾಲವನದ ಸದಸ್ಯ ಕಾರ್ಯದರ್ಶಿ, ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.