Teachers day special: ವಿದ್ಯಾರ್ಥಿಯ ಜೀವನದಲ್ಲಿ ಒಂದು ಬದಲಾವಣೆಗೆ ಕಾರಣರಾದ ಶಿಕ್ಷಕರಿವರು....

Teachers day special: ವಿದ್ಯಾರ್ಥಿಯ ಜೀವನದಲ್ಲಿ ಒಂದು ಬದಲಾವಣೆಗೆ ಕಾರಣರಾದ ಶಿಕ್ಷಕರಿವರು....


ತಸ್ಮಯೇ ಗುರುವೇ ನಮಃ. ಹುಟ್ಟುವ ಪ್ರತಿ ಮಗುವೂ ಸಾಮಾನ್ಯ ಜ್ಞಾನವನ್ನು ಹೊಂದಿರುತ್ತಾರೆ. ಆ ಜ್ಞಾನದಲ್ಲಿ ಹಲವು ಗುರಿ ಮತ್ತು ಛಲವಿರಬೇಕು ಆ ಗುರಿಗಳನ್ನು ಸಾಧಿಸಲು ಮಾರ್ಗದರ್ಶನ ನೀಡಲು ಗುರುವಿರಬೇಕು. ಒಂದು ವಿದ್ಯಾರ್ಥಿ ಕೇವಲ ಅಂಕ ಪಡೆಯಲು ಸೀಮಿತವಾಗಿರುತ್ತಾರೆ. ಸವಾಲುಗಳನ್ನು ಎದುರಿಸಲು ಕಲಿತಿರುವುದಿಲ್ಲ. ಜೀವನದ ಮೌಲ್ಯಗಳನ್ನು ಕಲಿತಿರುವುದಿಲ್ಲ. ಇವುಗಳನ್ನು ಪಾಠಗಳ ಜೊತೆಗೆ ಜೀವನ ಮೌಲ್ಯವನ್ನು ಮಕ್ಕಳಿಗೆ ತಿಳಿಸಿ ಕೊಡಲು ಶಿಕ್ಷಕರಿಂದ ಮಾತ್ರ ಸಾಧ್ಯ.. ಪ್ರತಿಯೊಂದು ವಿದ್ಯಾರ್ಥಿಯ ಜೀವನವನ್ನು ಬದಲಾಯಿಸುವ ಸಾಧಕರು ಶಿಕ್ಷಕರು.

ಶಿಕ್ಷಕರು ವಿದ್ಯಾರ್ಥಿಗಳನ್ನು ಅರ್ಥಮಾಡುವ ಮೂಲಕ ಒಳ್ಳೆಯ ಸ್ನೇಹಿತರಾಗಿ ವಿದ್ಯಾರ್ಥಿಯ ಕಷ್ಟ ಸುಖಗಳನ್ನು ತಿಳಿಯುವ ಮೂಲಕ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಂಬಂಧವು ಇನ್ನೂ ಬಿಗಿಗೂಳ್ಳುವಂತೆ ಮಾಡುತ್ತವೆ. ಆ ಸಂಬಂಧವನ್ನು ಬಿಗಿಗೊಳಿಸಿದ ನನ್ನ ನೆಚ್ಚಿನ ಶಿಕ್ಷಕರು ಗುರುಪ್ರಸಾದ್ ಸರ್.

ಅವರ ಪ್ರತಿಯೊಂದು ಮಾತು ನಮ್ಮಗೆ ಮೌಲ್ಯದ ಪಾಠವಾಗಿತ್ತು. ನನ್ನಗೆ ಬರೆಯುವ ಹವ್ಯಾಸ ಬರಲು ಮುಖ್ಯ ಕಾರಣ ಗುರುಪ್ರಸಾದ್ ಸರ್. ಅವರ ಪಾಠ ಕೇವಲ ಪಾಠವಾಗಿರಲಿಲ್ಲ ಜೀವನ ಪಾಠ ಮತ್ತು ಒಂದು ವೃತ್ತಿಯನ್ನು ಪಡೆಯ ಬೇಕಿದ್ದರೆ ಆ ವೃತ್ತಿಗೆ ತಯಾರಾಗಲು ಯಾವ ಹವ್ಯಾಸವನ್ನು ದೈನಂದಿನ ಜೀವನದಲ್ಲಿ ಅಳವಡಿಸಬೇಕು ಎಂದು ಹೇಳುತ್ತಿರುವ ಮಾತು ಇಂದಿಗೂ ನೆನಪಾಗುತ್ತಿದೆ. 

ಜೀವನದಲ್ಲಿ ಸರಿ ತಪ್ಪು ಯಾವುದು ಎಂಬುದನ್ನು ಪಾಠದ ವಿಷಯದಲ್ಲೂ ಅದೇ ರೀತಿ ದೈನಂದಿನ ಜೀವನದ ವಿಷಯದಲ್ಲೂ ತಿಳಿಸಿಕೊಟ್ಟವರು ನೀವು. ಪ್ರತಿಯೊಂದು ತರಗತಿಯಲ್ಲಿ ಹೇಳುತ್ತಿದ್ದ ಮಾತು ಸ್ವಂತ ಆಲೋಚನೆಗಳ ಮೂಲಕ ಬರೆಯಲು ಪ್ರಾರಂಭಿಸಿ ಮಕ್ಕಳೇ ಎಂದು ಸಹಕರಿಸಿ ಪ್ರೋತ್ಸಾಹಿಸಿ ಪ್ರತಿಯೊಂದು ವಿದ್ಯಾರ್ಥಿಯ ಜೀವನದಲ್ಲಿ ಒಂದು ಹೊಸ ಪ್ರತಿಭೆಯನ್ನು ಹೊರ ತಂದ ಶಿಕ್ಷಕ ನೀವು ಗುರುಪ್ರಸಾದ್ ಸರ್.

ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಸರ್.


ರಾಧಿಕಾ.

ಪತ್ರಿಕೋದ್ಯಮ ವಿದ್ಯಾರ್ಥಿ,

ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article