Teachers day special: ಶಿಕ್ಷಕರು ಕೇವಲ ಜ್ಞಾನವನ್ನು ನೀಡುವವರಲ್ಲ, ಬದಲಾಗಿ ಪ್ರೇರಣೆ ಮತ್ತು ಆತ್ಮವಿಶ್ವಾಸವನ್ನು ನೀಡುವವರು
ಶಿಕ್ಷಣವು ಕೇವಲ ಪುಸ್ತಕಗಳಲ್ಲಿ ಸಿಕ್ಕಿದ ಮಾಹಿತಿಯನ್ನು ಕಲಿಸುವುದಲ್ಲ, ಅದಕ್ಕೂ ಹೆರತಾಗಿ ಜೀವನದ ಪಾಠಗಳನ್ನು, ಪ್ರೇರಣೆಯನ್ನು ಮತ್ತು ಆತ್ಮವಿಶ್ವಾಸವನ್ನು ನೀಡುವ ಪ್ರಕ್ರಿಯೆ. ನನಗೆ ಜೀವನದ ಪಾಠವನ್ನು ಕಲಿಸಿದವರು ವೇರೆ ಯಾರು ಅಲ್ಲ ನನ್ನ ಅತ್ತೆ ಲಾವಣ್ಯ.
ಶಿಕ್ಷಕರು, ತಮ್ಮ ವಿದ್ಯಾರ್ಥಿಗಳಿಗೆ ಕೇವಲ ವಿಷಯವನ್ನು ಕಲಿಸುವುದಲ್ಲದೇ, ಅವರ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಅವರು ತಮ್ಮ ವಿದ್ಯಾರ್ಥಿಗಳಿಗೆ ಹೊಸದಾಗಿ ಕಲಿಯಲು, ತಮ್ಮ ಕನಸುಗಳನ್ನು ಸಾಧಿಸಲು ಮತ್ತು ಜೀವನದಲ್ಲಿ ಯಶಸ್ವಿಯಾಗಲು ಪ್ರೇರಣೆ ನೀಡುತ್ತಾರೆ ಎಂಬುವುದರಲ್ಲಿ ಸಂದೇಹವಿಲ್ಲ.
ನನ್ನ ಬದುಕಿನ ಗುರುವೇ ಅತ್ತೆ. ಅತ್ತೆಯಾ ಸ್ಥಾನವನ್ನು ಮರೆತು ಶಿಕ್ಷಕರಾಗಿ ನನ್ನ ಬದುಕಿನ ಧಿಕ್ಕನ್ನು ತೋರುವಲ್ಲಿ ಅವರ ಪಾತ್ರ ಬಹಳ ಪ್ರಾಮುಖ್ಯವಾಗಿದೆ ಬದುಕೆಂಬ ಕಷ್ಟದ ಹಾದಿಯಲ್ಲಿ ಹಾದಿಯಲ್ಲಿ ಯಾವ ರೀತಿ ನಡೆಯಬಹುದು ಎಂಬುದನ್ನು ಹಲವಾರು ಉದಾಹರಣೆಯ ಮೂಲಕ ತಿಳಿಸಿಕೊಟ್ಟ ನನ್ನ ನೆಚ್ಚಿನ ಶಿಕ್ಷಕಿ ಲಾವಣ್ಯ. ಅವರ ಜೀವನದ ಕಲೆಯನ್ನು ನನಗೆ ಪರಿಚಯಿಸಿದರು ಅವರದೇ ರೀತಿಯಲ್ಲಿ ಶಿಕ್ಷಕಿಯಾಗಿ ನಿರೂಪಣೆಯ ಮೂಲಕ ಮನಸೆಳೆದ ವ್ಯಕ್ತಿ ಅವರು.
ಬೋಧನೆ ಅಭ್ಯಾಸದ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನ ಸಾಮರ್ಥ್ಯ ಅಥವಾ ಸದ್ಗುಣಗಳನ್ನು ಪಡೆಯಲು ಸಹಾಯ ಮಾಡುವ ವ್ಯಕ್ತಿ ಶಿಕ್ಷಣ ಶಾಸ್ತ್ರ ವಿಷಯ ಜ್ಞಾನ ವಿಷಯದ ಬೋಧನೆಯಲ್ಲಿ ಕಲಿಯುವವರ ಮೌಲ್ಯಮಾಪನದಲ್ಲಿ ಸಾಮರ್ಥ್ಯ ಮನೋವಿಜ್ಞಾನ ನಾಯಕತ್ವ ಇವೆಲ್ಲವನ್ನು ನೀಡುವ ವ್ಯಕ್ತಿ ನನ್ನ ಅತ್ತೆ ಲಾವಣ್ಯ.
ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಮೇಡಂ.
ನಿರೀಕ್ಷಾ,
ಪತ್ರಿಕೋದ್ಯಮ ವಿದ್ಯಾರ್ಥಿ
ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.
