Teachers day special: ನೀ ಗುರುವಾಗಿ ದಾರಿ ತೋರಿಸಿದ ಕ್ಷಣ ಅವಿಸ್ಮರಣೀಯ...

Teachers day special: ನೀ ಗುರುವಾಗಿ ದಾರಿ ತೋರಿಸಿದ ಕ್ಷಣ ಅವಿಸ್ಮರಣೀಯ...


ನಾ ಮುಂದೆ ತಾ ಮುಂದೆ ಎಂದು ಓದುಗರ ಮಧ್ಯದಲ್ಲಿ ನನ್ನದೊಂದು ಪುಟ್ಟ ಪ್ರಪಂಚ ಓದಬೇಕು ಎಂಬ ಹಂಬಲ ಮನದಲ್ಲಿ, ಆದರು ಎಷ್ಟೇ ಪ್ರಯತ್ನಿಸಿದರೂ ಸಾಲದು ನನ್ನ ಓದಿಗೆ ಎಂದು ಗೊತ್ತಾದರು ನನ್ನೀ ಸೋಮಾರಿತನದಿಂದ ನಾ ಸುಮ್ಮನಿದ್ದೆ.

ಹೀಗೆ ನನ್ನ ಬಾಲ್ಯದ ಶಿಕ್ಷಣ ಅಲ್ಲಿಗೆ ಮುಗಿದಿತ್ತು. ನಂತರದ ಅಭ್ಯಾಸಕ್ಕೆಂದು ನಾ ಮಂಗಳೂರು ಪ್ರದೇಶ ಎಂಬಲ್ಲಿ ನಾ ಕಂಡ ಮೊದಲ ಬಾರಿಗೆ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು. ನನ್ನನ್ನು ಆತ್ಮೀಯವಾಗಿ ಸ್ವಾಗತಿಸುವಂತಿತ್ತು. ಆದರು ನಾ ಹೈಸ್ಕೂಲ್ ಪಾಸ್ ಆದಾದು ನನ್ನ ದೊಡ್ಡ ಪುಣ್ಯ, ಅದರಲ್ಲಿ ಪಿಯುಸಿ. ಓದೋದು ಇನ್ನೂ  ಸಂತೋಷದಲ್ಲಿ ಇದ್ದರು, ಪಿಯುಸಿ ಓದಿ ಏನು ಮಾಡಬೇಕೆಂದು ತೋಚದೆ ಯಾವುದಕ್ಕಾದರು ಸೇರುವ ಎಂದು ಹೊರಟೆ. ಆದರೆ ಅಲ್ಲಿಗೆ ಭೇಟಿ ನೀಡಿದ ನಂತರ ಅಚ್ಚರಿಯ ವಿಷಯ ಏನೆಂದರೆ ಅಲ್ಲಿ ನಾನು ಆಯ್ಕೆ ಮಾಡಲು ಇರುವ ಮೂರು ಕೋರ್ಸ್‌ನಲ್ಲಿ ಒಂದನ್ನು ಆಯ್ಕೆ ಮಾಡುವಂತಹ ಪರಿಸ್ಥಿತಿ ಎದುರಾಯಿತು. 

ನನಗೆ ದಿಕ್ಕು ತೋಚದೆ ನಿಂತ ಜಾಲದಲ್ಲಿ ಕುಳಿತು ಆಲೋಚಿಸಲು ಶುರು ಮಾಡಿದೆ. ಅಲ್ಲಿಂದ ಆಕಸ್ಮಿಕವಾಗಿ ಯಾರೋ ಕರೆದಂತಾಯಿತು. ಆದರೆ ಅದು ನನ್ನ ಬಾಲ್ಯದ ಗೆಳತಿ ಆಗಿದ್ದಲು. ಅವರೊಂದಿಗೆ ಮಾತನಾಡುತ್ತಾ ನಾನು ತೆಗೆಯುವ ಕೋರ್ಸ್‌ಗಳ ಬಗ್ಗೆ ಅವರೊಂದಿಗೆ ಹಂಚಿಕೊಂಡು ಆವಳಿಂದ ಬಂದ ಉತ್ತರ ನೀನು ಓದುವುದಾದರೇ ಕಲಾ ವಿಭಾಗದಲ್ಲಿ ಮನೋವಿಜ್ಞಾನ ಎನ್ನುವ ಕೋರ್ಸ್‌ನ್ನು ಓದು ಎಂದು ಹೇಳಿಕೆ ನೀಡಿದಳು.

ನಾನೋ ಓದೋಕೆ ಯಾವ ವಿಷಯ ಇದೆ ಎಂದು ಆ ಒಂದು ಕೋರ್ಸ್‌ಗೆ ಸೇರ್ಪಡೆ ಅದೇ. ಬಹು ದಿನಗಳ ನಂತರ ಕಾಲೇಜು ಪ್ರಾರಂಭವಾಯಿತು. ಹೊಸ ಕಾಲೇಜು, ಅಪರಿಚಿತ ವ್ಯಕ್ತಿಗಳು, ಎಲ್ಲವೂ ಹೊಸದಾಗಿತ್ತು.

ನನ್ನ ತರಗತಿಯ ಶಿಕ್ಷಕರಾಗಿ ಪ್ರಭಾಕರ್ ಸರ್ ಆಗಿದ್ದರು. ಯಾರೇ ಆದರು ಹೊಸ ಕಾಲೇಜಿಗೆ ಪ್ರವೇಶ ನೀಡಿದರೆ, ಸಹಜವಾಗಿ ಮಾಸ್ತರು, ಟೀಚರ್ ಜೋರೀದ್ದಾರಾ, ಪಾಪ ಇದ್ದರಾ ಎಂದು ಮೊದಲು ತಲೆಗೆ ಬರುವ ಪ್ರಶ್ನೆ! ಹೀಗೆ ನನಗೂ ಆಯಿತು. ಅಪರಿಚಿತ ಸ್ನೇಹಿತರು ಪರಿಚಯವಾದರು. ತರಗತಿ ಎಲ್ಲವೂ ಪ್ರಾರಂಭವಾಯಿತು. ನಾನು  ಎಲ್ಲಾ ಶಿಕ್ಷಕರನ್ನು ಭೇಟಿ ನೀಡಿದೆ. ನಂತರ ಇವರು ವಿಶೇಷವಾಗಿ ಕಂಡರೂ ಸಹ ಇವರು ಎಲ್ಲ ಶಿಕ್ಷಕರ ಹಾಗೆ ನನಗೆ ಕಾಣಲಿಲ್ಲ. ಗುರುಗಳ ಹಾಗೆ ಕಂಡರೂ. ಇವರ ನಡತೆ, ಧನಾತ್ಮಕವಾದ ಮಾತು, ಹಲವಾರು ಮಕ್ಕಳಿಗೆ ಸಾಂತ್ವನ ತುಂಬುವಂತಿತ್ತು. ಶಿಕ್ಷಕರು ಕಾಲೇಜಿಗೆ ಸಂಬಳಕ್ಕಾಗಿ ಹೋಗಿ ಪಾಠ ಮಾಡಿದರೆ ಸಾಕೆನ್ನುವ ಮನಸ್ಥಿತಿ.  ಆದರೆ ನಾನು ತಿದ್ದಿದ ಮಕ್ಕಳು ನನಗಿಂತ ಉತ್ತಮ ಉದ್ಯೋಗ ಸಿಗಬೇಕೆಂದು ಆಶಿಸಿದ ಗುರು ಇವರು. ಸೋತ ವಿದ್ಯಾರ್ಥಿಗಳಿಗೆ ಹೇಳಿಕೊಡುವಂತಹ ಅಧಿಸೂಚನೆ  ಹಾಗೂ ಸೌಕ್ಯಾ ಇಲ್ಲದ ವಿದ್ಯಾರ್ಥಿಗಳಿಗೆ ಬೇಕಾದ ಔಷಧಿ, ಹಣ್ಣುಕೊಟ್ಟು ಸಲಹೆ ನೀಡುತ್ತಾರೆ. ನನಗೆ ಗೊತ್ತಿರುವಂತಹ ಪ್ರಕಾರ ದೊಡ್ಡವರಿಗೆ ಗೌರವ ಕೊಡಬೇಕು. ಆದರೆ ಇವರಿಗಿ೦ತ ಚಿಕ್ಕವರಿಗೂ ಕೊಡುವಂತಹ ಗೌರವವನ್ನು ನಾನು ಕಂಡೆ ಅವರಲ್ಲಿ.

ಆ ಕಾಲೇಜಿನಲ್ಲಿ ಹೆಣ್ಣು ಮಕ್ಕಳು ಇರುವ ಕಾರಣ ಎಲ್ಲ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳ ಹಾಗೆ ನೋಡಿಕೊಳ್ಳುತ್ತಾರೆ ಹಾಗೂ ಎಲ್ಲ ತರಗತಿಯ ಮುಂದೆ ತನ್ನ ತರಗತಿಯನ್ನು ಎಂದು ಬಿಟ್ಟುಕೊಡದವರು ನಿಜಾವಾದ ಶಿಕ್ಷಕ. ಓದುಗರಾರಿಗೆ ಆಸಕ್ತಿ ಹೊಂದಿದವರಿಗೆ ಇನ್ನಷ್ಟು ಮಾಹಿತಿಯನ್ನು ನೀಡಿ, ಓದುವಿನಲ್ಲಿ ಹಿಂದುಳಿದವರಿಗೆ   ಪಾಸಾಗುವಂತೆ ಮತ್ತಷ್ಟು ಉಮ್ಮಸ್ಸು ಮೂಡಿಸುತ್ತಾರೆ. ಹಾಗೂ ಎಲ್ಲರೊಂದಿಗೂ ಒಬ್ಬರಾಗಿರುತ್ತಾರೆ.

ಮಕ್ಕಳಿಗೆ ಹೇಳಿಕೊಡುವಂತಹ ಸಂಸ್ಕೃತಿ, ಧೈರ್ಯ ಓದುಗರರಿಗೆ ಬೆನ್ನು ತಟ್ಟುವ ಗುರುವನ್ನು ನಾನು ಕಂಡೆ. ಎರಡು ವರ್ಷಗಳಲ್ಲಿ ಇವರನ್ನು ನೋಡಿ ಕಲಿತದ್ದು ತುಂಬಾ  ಹಾಗೂ ನನ್ನನ್ನು ನಾನು ಬದಲಿಸಿಕೊಂಡು ಪಿಯುಸಿ ಮುಗಿಸಿ ಮನೋವಿಜ್ಞಾನ ಎಂಬ ವಿಷಯದಲ್ಲಿ ನಾನು ಮುಂದುವರೆದೆ. ನಾನು ಓದುವಿನ ವಿಷಯದಲ್ಲಿ ತೀರ ಹಿಂದೆ  ಉಳಿದವಳು ಇಂದು ಒದುತ್ತಿದ್ದೆನೆ ಅಂದರೆ ಅದಕ್ಕೆ ನೀವು ಕಾರಣ ಸರ್. 

ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಸರ್.


ವೆಂಕಮ್ಮ

ಪತ್ರಿಕೋದ್ಯಮ ವಿದ್ಯಾರ್ಥಿ

ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article