Teachers day special: ಗುರುಗಳು ಕಣ್ಣು ತೆರಿಸಿದ ದೇವರು...

Teachers day special: ಗುರುಗಳು ಕಣ್ಣು ತೆರಿಸಿದ ದೇವರು...


ಹೇ ಗುರುವೇ ಹೆದರಿಕೊಂಡು ಕುಳಿತೆ ನಿನ್ನ ಎದುರಿಗೆ, ಆ ಗಂಭೀರವಾದ ಮುಖದ ಹಿಂದೆ ಇರುವ ಆ ನಿಮ್ಮ ಶಾಂತದ ಮುಖ... 

ಮಾಡಿತು ನನ್ನ ಜ್ಞಾನಿಯಾಗಿ.... ಕರುಳು ಕುಡಿಗಿಂತ ಹೆಚ್ಚಾಗಿ ನೋಡಿಕೊಂಡು ಕಲಿಸಿದೆ...

ಹೇ ಗುರೂಜಿ ಹೇಗೆ ತಡೆದಿರಿ ಆ ನನ್ನ ತುಂಟ ತನವ, ಹಿಂದೆ ಕೂತು ಮಾಡಿರುವ ಗಲಾಟೆ ಹೇಗೆ ಸಹಿಸಿದಿರಿ...

ಆ ನಿಮ್ಮ ಮದುರ ಧ್ವನಿಯಿಂದ ಪಾಠ ಮಾಡಲು ಶುರು ಮಾಡಿದಾಗ ನಾವು ಮಾಡಿದ ತರ್ಲೆಗಳನ್ನು,

ಹೇಗೆ ಸಹಿಸಿ ವಿದ್ಯೆ ನೀಡಿದಿರಿ...

ಪಾಠವನ್ನು ಕೇಳದೆ ನಿದ್ದೆಗೆ ಜಾರಿದಾಗ ಬಡೆದೆಬ್ಬಿಸುವ ಆ ನಿಮ್ಮ ಹಾಸ್ಯದ ಮಾತುಗಳನ್ನು ನೀಡಿದ ಆ ಕಲೆಯನ್ನು,

ಎಂದೆಂದಿಗೂ ಆ ನಮ್ಮ ಮನಸ್ಸಿನಲ್ಲಿ ಮೆಚ್ಚುವೆ, ಶಾಲೆಯನ್ನು ತೊರೆದು ನಿಂತಾಗ ಮನೆಯ ಬಾಗಿಲ ಬಳಿಗೆ ಬಂದಿರುವಿರಿ ಕರೆಯಲು,

ನೀ ನನಗೆ ಕಲಿಸಿದ ಅಕ್ಷರ ಹೇಗೆ ಮರೆಯಲಿ... ಆ ಬಗೆಯ ಕಲರವ 

ಸಿಟ್ಟಾಗದೆ ಕಲಿಸಿದೆ ನೀ ನನಗೆ ಒಂದೊಂದ್ದು ಬರಹವ, ತಪ್ಪು ಬರೆದಾಗ ಸಾವಿರಾರು ಬಾರಿ ತಿದ್ದಿದ ಆ ನಿಮ್ಮ ಹೃದಯವನ್ನು

ಜ್ಞಾನಜ್ಯೋತಿ ಬೆಳಗುವಂತಹ ಕೀರ್ತಿಯನ್ನು ಮಾಡಿದ ಆ ಪ್ರೋತ್ಸಾಹದಿಂದ ನಾಡ ಸೇವೆಯನ್ನು ಮಾಡಲು ನೀಡಿದೆ....

ನಿವು ನನ್ನ ಪ್ರಥಮ ಗುರು... ಶತ್ರುಗಳು ಬೆನ್ನಟ್ಟಿದಾಗ ಎದುರಿಸುವುದನ್ನು ಹೇಳಿದ ಆ ನಿಮ್ಮ ಕಲೆ 

ಮರೆಯದೆ ಇರುವೆ ನಾ ಎಂದೆದಿಗೂ ಚಿರಋಣಿ..

ನಿಮ್ಮ ಕಗ್ಗತ್ತಲೆಯ ಸಮಯದಲ್ಲಿ ನನ್ನ ಶಿರವನ್ನು ತೆಗೆದು ನಿಮ್ಮ ಪಾದುಗೆಗೆ ಇಡುವೆ,

ಬಾಡಿ ಹೋಗಿರುವ ನನ್ನ ಜೀವನದ ಹೂವನ್ನು, ವಿದ್ಯಾ ದೇಗುಲದಲ್ಲಿ ಅರಳಿಸಿದ ನಿಮಗೆ ನಾನೆಂದು ಹೃದಯ ಸ್ಪರ್ಶಿ,

ನನ್ನ ಬಾಳಿನಲ್ಲಿ ಅಂಧಕಾರವನ್ನು ಹೋಗಲಾಡಿಸಿ ಈ ಬದುಕನ್ನು ಸುಂದರಕಾಂಡವನ್ನಾಗಿ ಮಾಡಿದ ಗುರುವಾಗಿರುವೆ..

ನಾವು ಕಷ್ಟದಲ್ಲಿ ಇರುವಾಗ ಸ್ಪಂದಿಸಿದ ಆ ನಿಮ್ಮ ಮನಸ್ಸಿನ ಭಾವನೆಗಳು, 

ಹಸಿವಾದಾಗ ಮೈದಾನದಲ್ಲಿ ಅಳುತ್ತಾ ನಿಂತಾಗ ತುತ್ತು ಕೊಟ್ಟ ಆ ಸಮಯ... 

ವಿದ್ಯೆ ಕೊಟ್ಟ ನಿನ್ನ ಋಣವ ಮರೆಯಲಾರೆ ಯುಗಯುಗಗಳಾಚೆ....

ಜ್ಞಾನ ನೀಡಿದ ಗುರುವು ಕಣ್ಣು ಕೊಟ್ಟ ದೇವರಿಗಲ್ಲವೇ ಸಮ, 

ಸಾಧಕನಾಗಿ ಬೆಳೆದು ನಿಂತಾಗ ನಾ ನಿನ್ನ ನೆನೆಸುವೆ....

ವಿಧೇಯನಾಗಿ ನಿನ್ನ ಹೃದಯ ತಂಪುಗೊಳಿಸುವೆ...

ನೀ ಹೇಗೆ ನಡೆದುಕೊಂಡು ಹೋಗಿರುವೆ ಹಾಗೆ ನಡೆಯುವೆ,

ಎಂದಿಗೂ ದ್ವೇಷಿಸಲಾರೆ ಆ ನಿಮ್ಮ ವ್ಯೆಕ್ತಿತ್ವವನ್ನು.

ಜೀವ ಇರುವರೆಗೂ ಮಾಡಲಾರೆ ನಿಮ್ಮ ಮೇಲೆ ಆಪಾದನೆ,

ಯುಗ ಯುಗ ಕಳೆದರೂ ನಿನ್ನ ಮರೆಯಲಾರೆ. 

ಹೇ ಪೂಜ್ಯ ಗುರುವೆ..... 

ಮಮತೆ ನೀಡಬಲ್ಲಳು ಮಾತಾಜೀ... ಸಂಸ್ಕಾರ ನೀಡುವನು ಪಿತಾಜೀ...  

ಸೃಜನ ಶಿಲ ಸಮ್ಯಕ ಜ್ಞಾನ ನೀಡುವವರು ಗುರೂಜಿ...

ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಸರ್....

ದೀಪಾ.

ಪತ್ರಿಕೋದ್ಯಮ ವಿದ್ಯಾರ್ಥಿ,

ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article