Teachers day special: ನನ್ನ ಬದುಕಿನ ಸ್ಪೂರ್ತಿಯೇ ನೀವು....

Teachers day special: ನನ್ನ ಬದುಕಿನ ಸ್ಪೂರ್ತಿಯೇ ನೀವು....


ಸದಾ ನಗು ಮುಖದಿಂದ ನಮಗೆ ಸ್ಪೂರ್ತಿಯ ಗುಣ ಔಚಿತ್ಯದ ಹುರುಪು, ಉತ್ಸಹ ಪ್ರೇರಣೆಯೊಂದಿಗೆ ಪ್ರೋತ್ಸಹಿಸಿದ ಶಿಕ್ಷಕರಾಗಿ ನನಗೆ ಸ್ಪೂರ್ತಿ ನನಗೆ ವಿದ್ಯೆಯನ್ನು ನೀಡುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಕೂಡ ಕಲಿಸಿದವರು.

ನನ್ನ ಬದುಕಿನ ಜ್ಯೋತಿಯಾದವರು. ನನಗೆ ಅಕ್ಷರ ಕಲಿಸಿದ ಗುರು ಇವರು. ಏನು ಬಾರದ ನನಗೆ ಎಲ್ಲವನ್ನು ಕಲಿಸಿದವರಿವರು. ಅವರೇ ನನ್ನ ನೆಚ್ಚಿನ ಶಿಕ್ಷಕಿ ಆ್ಯಗ್ನಿಸ್ ಡಿಸೋಜ ಮೇಡಂ.

ನಾನು ಮೊದಲ ದಿನ ಶಾಲೆಗೆ ಕಾಲಿಟ್ಟಾಗ ಪ್ರೀತಿಯಿಂದ ಬರಮಾಡಿಕೊಂಡು ವಿದ್ಯೆಯೊಂದಿಗೆ ಪ್ರೀತಿಯನ್ನೂ ನೀಡಿದವರು ನನ್ನ ಮೇಡಂ.

ತಾಯಿಯ ಹಾಗೆ ಊಟ, ಮಳೆ ಬಂದಾಗ ಆಸರೆಯಾಗಿ ನೆನೆಯದಂತೆ ಕೊಡೆ ಕೊಟ್ಟ ಮಾತೃ ಹೃದಯಿ ನನ್ನ ಮೇಡಂ.

ಓದಲು ಬರೆಯಲು ಪುಸ್ತಕವಿಲ್ಲದಾಗ ಪುಸ್ತಕವನಿತ್ತು ವಿದ್ಯೆ ನೀಡಿದ ತಾಯಿ ನನ್ನ ಮೇಡಂ. ಅವರು ಕೊಟ್ಟ ಜ್ಞಾನ ಉಪಯೋಗವಾಗಬೇಕೆ ಹೊರತು ನಷ್ಟವಲ್ಲ ಎಂಬುವುದನ್ನು ನಾನು ಅವರಿಂದ ಕಲಿತೆ. 

ನಾನು ಶಾಲೆ ಬಿಟ್ಟು ಬರುವಾಗ ಏನೇ ಸಮಸ್ಯೆಯಾದರೂ ನಾನಿದ್ದೇನೆ ನಿನ್ನೊಂದಿಗೆ ಎಂದು ತುಂಬಿದ ಧೈರ್ಯ ಇಂದಿಗೂ ನನ್ನ ಸಾಧನೆಗೆ ಸ್ಪೂರ್ತಿ.

ನನ್ನ ಜೀವ ಇರುವವರೆಗೆ ನಾನು ನಿಮಗೆ ಚಿರವೃಣಿ ಮೇಡಂ. ಐ ಮಿಸ್ ಯು ಮೇಡಂ.

ನಿಮಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಮೇಡಂ.


ನಸಿಬಾ.

ಪತ್ರಿಕೋದ್ಯಮ ವಿದ್ಯಾರ್ಥಿ.

ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜು. ರಥಬೀದಿ, ಮಂಗಳೂರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article