ಅಯೋಧ್ಯೆಯಲ್ಲಿ ರಾಮ ತಾರಕ ಹೋಮ
Sunday, September 22, 2024
ಉಡುಪಿ: ಅಯೋಧ್ಯೆ ಶ್ರೀರಾಮ ಮಂದಿರದ ವಿಶ್ವಸ್ಥ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಯೋಧ್ಯೆಯಲ್ಲಿ ಸೆ.26ರ ವರೆಗೆ ಮೊಕ್ಕಾಂ ಇರುವರು.
ಈ ಸಂದರ್ಭದಲ್ಲಿ ರಾಮ ಮಂದಿರದ ಯಾಗಶಾಲೆಯಲ್ಲಿ ವಿದ್ವಾನ್ ಶಶಾಂಕ ಭಟ್ ನೇತೃತ್ವದ ವೈದಿಕರಿಂದ ಪ್ರತಿನಿತ್ಯ ರಾಮ ತಾರಕ ಯಜ್ಞವನ್ನು ಶ್ರೀಗಳು ಸಂಕಲ್ಪಿಸಿದ್ದು, ಶ್ರೀಗಳು ಯಾಗ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.
ಶ್ರೀಮಠದ ಅಯೋಧ್ಯೆ ಶಾಖೆಯಲ್ಲಿ ಪಟ್ಟದ ದೇವರ ಪೂಜೆ, ಭಜನೆ, ರಾಮಾಯಣ ಚಿಂತನೆ ನಡೆಯಲಿವೆ ಎಂದು ಮಠದ ಪ್ರಕಟಣೆ ತಿಳಿಸಿದೆ.