ಶಾಸಕ ಮುನಿರತ್ನ ವಿರುದ್ಧ ದೂರು

ಶಾಸಕ ಮುನಿರತ್ನ ವಿರುದ್ಧ ದೂರು


ಉಡುಪಿ: ಮಾಜಿ ಸಚಿವ ಮುನಿರತ್ನ ನಿಂದನಾತ್ಮಕ ಮಾತಿನ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವರ ಹೇಳಿಕೆ ಎರಡು ಸಮುದಾಯಗಳಲ್ಲಿ ದ್ವೇಷ ಭಾವನೆ ಮೂಡುವಂತೆ ಮಾಡಿದ್ದಲ್ಲದೆ ಮಹಿಳೆಯರ ಬಗ್ಗೆ ಮಾತಾಡಿದ ರೀತಿ ಹಾಗೂ ಶೋಷಿತರ ಸಮುದಾಯವನ್ನು ಅತ್ಯಂತ ಕೀಳುಮಟ್ಟದಲ್ಲಿ ನಿಂದಿಸಿರುವುದು ಖಂಡನೀಯ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಪಿ ಡಾ. ಅರುಣ್ ಅವರಿಗೆ ದೂರು ನೀಡಲಾಯಿತು.

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯ ಕುಮಾರ್, ರಾಜ್ಯ ಪದಾಧಿಕಾರಿಗಳಾದ ಕೇಶವ ಸಾಲ್ಯಾನ್ ಹೆಜಮಾಡಿ ಮತ್ತು ಶ್ರೀ ದಿನೇಶ್, ಕಾಪು ತಾಲೂಕು ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಬ್ಲಾಕ್ ಅಧ್ಯಕ್ಷ ರಾಘವ ಕೋಟ್ಯಾನ್, ಲಕ್ಷ್ಮೀಶ ಶೆಟ್ಟಿ ಮತ್ತು ಶ್ರೀಧರ ಶೇಟ್ ಅವರು ಎಸ್ಪಿಗೆ ನೀಡಿದರು.

ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ವಿಭಾಗ ಮನವಿಯಲ್ಲಿ ಆಗ್ರಹಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article