ಪಂಪು ಹೌಸ್‌ಗೆ ನುಗ್ಗಿದ ಕಾರು
ಉಡುಪಿ: ಮಣಿಪಾಲ ಪರ್ಕಳ ಈಶ್ವರ ನಗರದಲ್ಲಿರುವ ಉಡುಪಿ ನಗರಸಭೆಗೆ ಸೇರಿದ ಪ್ರಥಮ ಹಂತದ ಕುಡಿಯುವ ನೀರಿನ ಪಂಪ್ ಹೌಸ್‌ಗೆ ಮಧ್ಯರಾತ್ರಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಪಂಪ್ ಹೌಸ್‌ನಲ್ಲಿ ಮಲಗಿದ್ದ ಸಿಬ್ಬಂದಿ ಅಪಾಯದಿಂದ ಪಾರಾದ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ.
ರಾತ್ರಿ ಸುಮಾರು ಒಂದು ಗಂಟೆ ಸುಮಾರಿಗೆ ಅತೀ ವೇಗದಿಂದ ಬಂದ ಕಾರು, ಪಂಪ್ ಹೌಸ್‌ನ ಕಟ್ಟಡಕ್ಕೆ ಢಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಪಂಪ್ ಹೌಸ್‌ಗೂ ಹಾನಿಯಾಗಿದೆ.
ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟಂತೆ ಅಲ್ಲಿ ಯಾವುದೇ ಸುರಕ್ಷತಾ ಬೇಲಿ ಇಲ್ಲ. ಮುಂದೆ ಹಳೆ ರಸ್ತೆ ಇದೆ ಎಂಬ ಸೂಚನಾ ಫಲಕವೂ ಇಲ್ಲ. ಪಂಪ್ ಹೌಸ್ ಮಣಿಪಾಲದ ಖಾಸಗಿಯವರು ಉಪಯೋಗಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ರಸ್ತೆ ಅಗೆದು. ಪಂಪ್ ಹೌಸಿನ ನೀರು ಬಳಕೆ ಮಾಡುತ್ತಿದ್ದಾರೆ ಸಮರ್ಪಕವಾಗಿ ಅಗೆದ ರಸ್ತೆಯನ್ನು ಮುಚ್ಚದೆ ಕಾಮಗಾರಿ ನಡೆಸಿದ್ದಾರೆ. ಇತ್ತೀಚೆಗೆ ಶಾಸಕರು ಬಂದು ಗುಂಡಿ ಮುಚ್ಚಿಸಿದ್ದರು. ಇದೀಗ ಮತ್ತೆ ಗುಂಡಿ ಉಂಟಾಗಿದೆ. ನಗರಸಭೆ ಪಂಪ್ ಹೌಸ್‌ನ ಎದುರು ಕೃಷ್ಣ ಜನ್ಮಾಷ್ಟಮಿ ದಿನದಂದು ಎರಡೆರಡು ಕಾರುಗಳು ಅಪಘಾತವಾಗಿತ್ತು. ಅಪಘಾತದ ನೆನಪು ಮರೆ ಮಾಚುವ ಮೊದಲೇ ಇದೀಗ ಮತ್ತೊಂದು ಕಾರು ನುಗ್ಗಿದೆ ಎಂದು ಸ್ಥಳೀಯರಾದ ಗಣೇಶರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.