ಮೆಲ್ಕಾರ್‌ನಲ್ಲಿ ಬೈಕ್ ಕಳವು: ಆರೋಪಿಯ ಬಂಧನ

ಮೆಲ್ಕಾರ್‌ನಲ್ಲಿ ಬೈಕ್ ಕಳವು: ಆರೋಪಿಯ ಬಂಧನ

ಬಂಟ್ವಾಳ: ಮೆಲ್ಕಾರ್ ಪ್ರೈ ಓವರ್ ಕೆಳಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ಬೈಕನ್ನು ವಶಪಡಿಸಿದ್ದಾರೆ.

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು, ನಾವೂರು ಗ್ರಾಮದ ನಿವಾಸಿ ಅಬೂಬಕ್ಕರ್ ಸಿದ್ದೀಕ್ (40) ಎಂದು ಹೆಸರಿಸಲಾಗಿದೆ.

ಬಂಟ್ವಾಳ ನಗರ ಠಾಣಾ ಪಿಎಸ್‌ಐ ದುರ್ಗಪ್ಪ ಅವರ ನೇತೃತ್ವದ ಪೊಲೀಸರು ಬಿ.ಸಿ. ರೋಡಿನ ಫೈ ಓವರ್ ಕೆಳಗೆ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಿ.ಸಿ. ರೋಡು ಸರ್ಕಲ್ ಕಡೆಯಿಂದ ಬಂದ ವಾಹನ ನಿಲ್ಲಿಸಿ ತಪಾಸಣೆ ನಡೆಸಿ ಚಾಲಕ ಅಬೂಬಕ್ಕರ್ ಸಿದ್ದಿಕ್ ಪೊಲೀಸರಿಗೆ ಅಸಮರ್ಪಕ ಉತ್ತರ ನೀಡದ್ದು, ಇದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ತೆಗೆದು ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ಮೆಲ್ಕಾರ್ ಫೈಓವರ್ ಕೆಳಗಡೆಯಿಂದ ಬೈಕನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡ ಹಿನ್ನಲೆಯಲ್ಲಿ ಪೊಲೀಸರು ಅತನನ್ನು ಬಂಧಿಸಿ ವಾಹನ ವಶಪಡಿಸಿದ್ದಾರೆ.

ಸೆ.9 ರಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಬೈಕ್ ಕಳವು ಪ್ರಕರಣ ದಾಖಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article