ದೇಶಕ್ಕೆ ಮಾದರಿಯಾದ ಸಾಮಾನ್ಯ ವ್ಯಕ್ತಿ ಗಾಂಧೀ: ಪ್ರೊ. ಗಣಪತಿ ಗೌಡ
Friday, October 4, 2024
ಮಂಗಳೂರು: ಸಾಮಾನ್ಯ ವ್ಯಕ್ತಿಯಾಗಿದ್ದ ಮಹಾತ್ಮ ಗಾಂಧೀಜಿಯವರು ಎಲ್ಲಾ ವಿಷಯದಲ್ಲೂ ಮಾದರಿಯಾಗುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಾಲಯ, ಆಂತರಿಕ ಗುಣಮಟ್ಟ ಖಾತರಿ ಕೋಶ ಮತ್ತು ಇತಿಹಾಸ ವಿಭಾಗದ ವತಿಯಿಂದ ನಡೆದ ಗ್ರಂಥಾವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಂಧೀಜಿಯವರ ತ್ಯಾಗ, ಅಹಿಂಸೆ, ಸತ್ಯನುಡಿ, ಜೀವನ ತತ್ತ್ವಗಳು ಎಂದಿಗೂ ಅಮರವಾದುದು. ಯಾವ ಕಾಲಕ್ಕೂ ಸಲ್ಲುವಂತಹ ಹಾಗೂ ಮಾದರಿ ವ್ಯಕ್ತಿತ್ವ ಅವರದ್ದು. ಇಂತಹ ಮೇರು ವ್ಯಕ್ತಿತ್ವ ಯಾರಲ್ಲೂ ಕಾಣಿಸಿಗದು ಎಂದರು.
ದ್ವಿತೀಯ ಬಿಎ ವಿದ್ಯಾರ್ಥಿನಿ ತೇಜಸ್ವಿನಿ ಮತ್ತು ಪ್ರಥಮ ಬಿಎ ವಿದ್ಯಾರ್ಥಿ ಮುತ್ತು ಗಾಂಧಿ ವಿರಚಿತ ಪುಸ್ತಕ ವಿಮರ್ಶೆ ಮಾಡಿದರು. ಇದೇ ವೇಳೆ ಗ್ರಂಥಪಾಲಕಿ ಡಾ. ವನಜಾ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಜಯರಾಜ್ ಎನ್., ಉಪನ್ಯಾಸಕರಾದ ಕವಿತಾ ಮತ್ತು ಅಶೋಕ್ ರಾಥೋಡ್ ಡಿಸೋಜಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.