ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತ್ಯು

ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತ್ಯು

ಬೆಳ್ತಂಗಡಿ: ನದಿಗೆ ಇಳಿದಿದ್ದ ಯುವಕನೊಬ್ಬ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ನೆರಿಯ ಗ್ರಾಮದಲ್ಲಿ ಸಂಭವಿಸಿದೆ.

ನೆರಿಯ ಗ್ರಾಮದ ತೋಟತ್ತಾಡಿ ಪಿತ್ತಿಲು ನಿವಾಸಿ ಶಿವಕುಮಾರ್ ಎಂಬಾತ ಮೃತಪಟ್ಟಿರುವ ಯುವಕ. ಈತ ಭಾನುವಾರ ಗೆಳೆಯರೊಂದಿಗೆ ಮೀನು ಹಿಡಿಯಲು ನೆರಿಯ ಗ್ರಾಮದ ಎಸ್ಟೇಟ್ ಒಂದರ ಸಮೀಪ ನದಿಗೆ ನದಿಗೆ ಹೋಗಿದ್ದ. ನದಿಯಲ್ಲಿ ಸಂಜೆಯ ವೇಳೆ ಈತ ನಾಪತ್ತೆಯಾಗಿದ್ದ. ಈತನಿಗಾಗಿ ಸ್ಥಳೀಯರ ನೇತೃತ್ವದಲ್ಲಿ ನಡೆಸಿದ ಹುಡುಕಾಟದಲ್ಲಿ ಮೃತದೇಹ ಪತ್ತೆಯಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಡ್ಡ ಕುಸಿತ..

ಬೆಳ್ತಂಗಡಿ ಮುಂಡಾಜೆಯಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ರಸ್ತೆ ಹಾಗೂ ಮನೆಯ ಮೇಲೆ ಬಿದ್ದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ರಸ್ತೆಯಲ್ಲಿ ವಾಹನ ಹಾಗೂ ಜನರ ಸಂಚಾರಕ್ಕೆ ಅನಾನುಕೂಲವಾಗುವ ರೀತಿಯಲ್ಲಿ ಮುಚ್ವಿ ಹೋಗಿದೆ.

ಮುಂಡಾಜೆ ಗ್ರಾಮದ ಪಿಲತ್ತಡ್ಕ ಎಂಬಲ್ಲಿ ವನದುರ್ಗಾ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಶ್ರೀಧರ ಪೂಜಾರಿ ಎಂಬವರ ಮನೆಯ ಸಮೀಪ ಮಳೆಯ ಅಬ್ಬರಕ್ಕೆ ಗುಡ್ಡ ಕುಸಿದಿದೆ. ರಸ್ತೆಗೆ ಹಾಗೂ ಮನೆಯ ಹಿಂಭಾಗದಲ್ಲಿ ಮಣ್ಣು ಬಿದ್ದಿದೆ.

ರಸ್ತೆ ಸಂಪೂರ್ಣ ಮುಚ್ಚಿ ಹೋಗಿದ್ದು ಜನರ ಹಾಗೂ ವಾಹನಗಳ ಸಂಚಾರ ಅಸಾಧ್ಯವಾಗಿದೆ. ಮನೆಯ ಹಿಂಭಾಗದಲ್ಲಿಯೂ ಮಣ್ಣು ಬಿದ್ದಿದ್ದು ಅಪಾಯಕಾರಿ ಸ್ಥಿತಿಯಿದೆ. ಇದೀಗ ಸ್ಥಳೀಯ ಯುವಕರು ರಸ್ತೆಗೆ ಬಿದ್ದಿರುವ ಮಣ್ಣನ್ನು ತೆರವು ಗೊಳಿಸುವ ಕಾರ್ಯ ನಡೆದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article