ಕರುನಾಡಿನ ಹೆಮ್ಮೆ ನಮ್ಮೀ ದಸರಾ...

ಕರುನಾಡಿನ ಹೆಮ್ಮೆ ನಮ್ಮೀ ದಸರಾ...


ಭಾರತವು ಅನೇಕ ಹಬ್ಬಗಳ ನಾಡೆಂದು ಹೆಸರುವಾಸಿಯಾಗಿದ್ದು, ಅದರಲ್ಲಿಯೂ ನಮ್ಮ ಕರ್ನಾಟಕದಲ್ಲಿ ಪ್ರಮುಖ ಹಬ್ಬಗಳ ಸಾಲಿನಲ್ಲಿ ನಿಲ್ಲುವುದು ದಸರಾ. ಈ ಹಬ್ಬವನ್ನು ನಾಡಹಬ್ಬ ಎಂದೂ ಕರೆಯುವ ವಾಡಿಕೆ ಇದೆ.
ಅಶ್ವಿನಿ ಮಾಸದ ಶುದ್ಧ ಪಾಡ್ಯದಂದು ದಸರಾ ಕಳಸವನ್ನು ಸ್ಥಾಪಿಸಲಾಗುತ್ತದೆ. ಒಂಬತ್ತು ದಿನಗಳ ಕಾಲ ಬಹಳ ಆಡಂಬರ ಮತ್ತು ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತೇವೆ.
ದಸರಾ ಹಬ್ಬವನ್ನು ನಾಡಿನಾದ್ಯಂತ ಸಮಸ್ತ ಜನರು ಪ್ರತೀ ವರ್ಷ ಆಚರಿಸಿಕೊಂಡು ಬರುತ್ತಿದ್ದಾರೆ. ಪ್ರತೀ ವರ್ಷ ಸೆಪ್ಟಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಆಚರಿಸುವ ಈ ಹಬ್ಬವನ್ನು ರಾಕ್ಷಸ ರಾಜ ರಾವಣನ ಮೇಲೆ ರಾಮನು ಗೆದ್ದ ಕಾರಣಕ್ಕಾಗಿ ಸಂಭ್ರಮಿಸುವ ಕ್ಷಣ ಇದಾಗಿದೆ.
ದುಷ್ಟ ಶಕ್ತಯ ಮೇಲೆ ಸತ್ಯದ ವಿಜಯವನ್ನು ದಸರಾ ಹಬ್ಬವು ಸೂಚಿಸುತ್ತದೆ. ಇದನ್ನು ನಾಡಿನ ಶ್ರೇಷ್ಠ ಹಬ್ಬವನ್ನಾಗಿ ಆಚರಿಸುತ್ತಿರುವುದು ವಿಶೇಷ. ಈ ಹಬ್ಬವು 10 ದಿನಗಳ ಕಾಲ ನಡೆಯುತ್ತಿದ್ದು, 9 ದಿನಗಳ ಕಾಲ ದೇವಿಯರ ಆರಾಧನೆ ನಡೆದರೆ ಕೊನೆಯ ದಿನ ವಿಜಯ ದಶಮಿ ಎಂದು ಆಚರಿಸಲಾಗುತ್ತದೆ.
ಈ ಹಬ್ಬದ ಮುಖ್ಯ ಉದ್ದೇಶ ದುಷ್ಟ ಶಕ್ತಗಳ ಸಂಹಾರ ಮಾಡಿ ಅಧರ್ಮವನ್ನು ತೊಡೆದುಹಾಕಿ ಧರ್ಮವನ್ನು ಸಾಧಿಸುವುದು ಈ ಹಬ್ಬದ ಒಂದು ಮಹತ್ವವಾಗಿದೆ. ಈ ಹಬ್ಬದಲ್ಲಿ ಮನೆಗಳನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಲಾಗುತ್ತದೆ. ಮತ್ತು ದಸರಾ ಹಬ್ಬವನ್ನು ಪ್ರತಿಯೊಬ್ಬರೂ ಮನೆಯಲ್ಲಿ ವಿಜೃಂಭಣಿಯಿಂದ ಆಚರಸಲಾಗುತ್ತದೆ.


-ಶಿಲ್ಪಾ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article