ನೋಡಬನ್ನಿ ನಮ್ಮ ಮಂಗಳೂರು ದಸರಾ...

ನೋಡಬನ್ನಿ ನಮ್ಮ ಮಂಗಳೂರು ದಸರಾ...


ದಸರಾವೂ ಒಂದು ಪುರಾತನ ಸಾಂಸ್ಕೃತಿಕ ಹಬ್ಬವಾಗಿದ್ದು, ನವರಾತ್ರಿ ಹಬ್ಬ, ವಿಜಯದಶಮಿ ಹಬ್ಬವಾಗಿ ಸಂಭ್ರಮದಿಂದ ಆಚರಿಸುತ್ತೇವೆ. ಈ ಹಬ್ಬದ ಸಮಯದಲ್ಲಿ ಹುಲಿ ನೃತ್ಯ, ಸಿಂಹ ನೃತ್ಯ ಮತ್ತು ಕರಡಿ ನೃತ್ಯ ಪ್ರಮುಖ ಆಕರ್ಷಣೆಗಳಾಗಿವೆ. ಈ ಸಂದರ್ಭದಲ್ಲಿ 10 ದಿನಗಳ ಕಾಲ ನಗರವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಬಹುತೇಕ ರಸ್ತೆಗಳಲ್ಲಿ ದಸರಾ ಮೆರವಣಿಗೆಗಾಗಿ ದೀಪಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವುದು ಕಂಡು ಬರುತ್ತದೆ. ವರ್ಣರಂಜಿತ ಮತ್ತು ಪ್ರಕಾಶಮಾನವಾದ ದೀಪಗಳಿಂದ ಅಲಂಕರಿಸಲ್ಪಟ್ಟ ಮಂಗಳೂರು ಸುಂದರವಾಗಿ ಕಾಣುತ್ತದೆ.
ಮಂಗಳೂರಿನ ದಸರಾ ಹಬ್ಬವನ್ನು ಆಚರಿಸುವಲ್ಲಿ ಪುರಾತನ ದೇವಸ್ಥಾನ ಮಂಗಳಾದೇವಿ ದೇವಸ್ಥಾನದಲ್ಲಿ ಆಚರಿಸುವ ದಸರಾ ಭಕ್ತರನ್ನು ಆಕರ್ಷಿಸುತ್ತದೆ. ಮಂಗಳೂರು ಎಂಬ ಹೆಸರು ಮಂಗಳಾದೇವಿಯಿಂದ ಬಂದಿದೆ. ಮಂಗಳಾದೇವಿ ದೇವಸ್ಥಾನವು ಜಾನಪದ, ಸಂಗೀತ, ನಾಟಕ, ವಿವಿಧ ವಿಷಯಗಳ ನಾಟಕಗಳು, ಮತ್ತು ಭಕ್ತಿಗೀತೆಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ. ಮಹಾನವಮಿ ಎಂದು ಕರೆಯಲ್ಪಡುವ ಒಂಬತ್ತನೇ ದಿನದಂದು ಭಕ್ತರು ರಥೋತ್ಸವದಲ್ಲಿ ಭಾಗವಹಿಸುತ್ತಾರೆ. ಅಲಂಕೃತ ದೇವಿಯನ್ನು ಭವ್ಯ ರಥದ ಮೇಲೆ ಕೂರಿಸಿದ ನಂತರ ರಥವನ್ನು ಎಳೆಯಲಾಗುತ್ತದೆ. ರಥೋತ್ಸವವು ವಿವಿಧ ದೇವತೆಗಳಿಂದ ತುಂಬಿರುತ್ತದೆ ಮತ್ತು ಅನೇಕ ಕೋಷ್ಟಕಗಳು ವರ್ಣರಂಜಿತ ದೀಪಗಳಿಂದ ಅಲಂಕೃರವಾಗಿರುತ್ತದೆ.
ಸಾರ್ವಜನಿಕರ ಶಿಸ್ತು ಮತ್ತು ಸುರಕ್ಷತೆಯನ್ನು ಕಾಪಾಡುವಲ್ಲಿ ಪೊಲೀಸ್ ಪಡೆ ಪ್ರಮುಖ ಪಾತ್ರವನ್ನು ಹೊಂದಿದ್ದು, ಅವರಿಗೆ ನಮನ ಸಲ್ಲಿಸುವುದು ನಮ್ಮ ಕೃತಜ್ಞತೆಯಾಗಿದೆ.


-ರಾಧಿಕಾ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article