ಪರಶುರಾಮರ ಸೃಷ್ಟಿಯ ತುಳುನಾಡಿನಲ್ಲಿ ಪೊಳಲಿ ದಸರಾ

ಪರಶುರಾಮರ ಸೃಷ್ಟಿಯ ತುಳುನಾಡಿನಲ್ಲಿ ಪೊಳಲಿ ದಸರಾ


ಭೂಲೋಕದಲ್ಲಿ ರಾಕ್ಷಸರ ಅಟ್ಟಹಾಸವು ಎಲ್ಲೆ ಮೀರಿ ಅನ್ಯಾಯವು ಅತಿಯಾಗಿ ಅಧರ್ಮವು ನೆಲೆ ನಿಂತ ಸಂದರ್ಭದಲ್ಲಿ ದುಷ್ಟಸಂಹಾರ ಹಾಗೂ ಶಿಷ್ಟರ ರಕ್ಷಣೆಗೆ ಬಂದಿರುವಾಕೆಯೇ ದುರ್ಗಾ ಮಾತೆ ದುರ್ಗಾಮಾತೆಯು ವಿವಿಧ ೯ ರೂಪಗಳಲ್ಲಿ ಬಂದು ಒಬ್ಬೋಬ್ಬ ರಾಕ್ಷಸರನ್ನು ಸಂಹಾರ ಮಾಡಿದಳು ಎನ್ನುವುದು ಪುರಾಣಗಳಿವೆ.
ಪರಶುರಾಮರ ಸೃಷ್ಟಿಯ ಈ ತುಳುನಾಡಿನಲ್ಲಿ ಪಲ್ಗುಣಿ ನದಿಯಿಂದ ಹಚ್ಚಸಿರಿನಿಂದ ಕಂಗೊಳಿಸುವ ನಾಡೆ ನಮ್ಮ ಊರು ಪೊಳಲಿ. ಸುರತರಾಜನ ಭಕ್ತಿಗೆ ಒಲಿದ ತಾಯಿ ರಾಜರಾಜೇಶ್ವರಿ ಅಮ್ಮ.
ನವರಾತ್ರಿಯ ಸಂದರ್ಭದಲ್ಲಿ  9 ದಿನಗಳ ಕಾಲ ವಿವಿಧ ಅಲಂಕಾರದಲ್ಲಿ ಪೂಜಿಸುತ್ತಾರೆ. ಹಾಗೂ 9ನೇ ದಿವಸದಂದು ಸುಮಾರು ಒಂದು ಗಂಟೆಗಳ ಪೂಜಾ ಸೇವೆ ವಿವಿಧ ಆರತಿಗಳಲ್ಲಿ ನೆರವೇರುತ್ತದೆ. ಹಾಗೂ ಆಯುಧ ಪೂಜೆ ದಿವಸ ಸಾವಿರಾರು ವಾಹನಗಳನ್ನು ಇಲ್ಲಿ ಪೂಜೆಗೆ ಇಡುತ್ತಾರೆ.
9 ದಿನಗಳ ಕಾಲ ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸುತ್ತಾರೆ. ಪೊಳಲಿ ಸಮೀಪದ ರಾಮಕೃಷ್ಣ ತಾಪವನದಲ್ಲಿ 9 ದಿನಗಳ ಪೂಜೆ ನಡೆದು, ನಂತರ ಹೆಣ್ಣು ಮಕ್ಕಳು ಎಂದರೆ ದೇವರ ಸ್ವರೂಪ ನವರಾತ್ರಿಯ ೯ ದಿನದ ದುರ್ಗಾ ಪೂಜೆ ಮಕ್ಕಳಿಗೆ ಸ್ವಾಮೀಜಿಯ ಮುಖಾಂತರ ಪೂಜೆ ನೆರವೇರುತ್ತದೆ ಹಾಗೂ ಆಶ್ರಮದ ವಿದ್ಯಾರ್ಥಿಗಳು ಮತ್ತು ಊರಿನ ಹಲವು ತಂಡಗಳಿಂದ ಭಜನೆ ನೆರವೇರುತ್ತದೆ. ಹಾಗೂ 9ನೇ ದಿನದಂದು ಸಾವಿರ ಸೀಮೆಗೆ ಒಳಪಟ್ಟ ವಿವಿಧ ತಂಡಗಳಿಂದ ಹುಲಿ ವೇಷ ಹಾಗೂ ಶಾರ್ದುಲ ವೇಷ ಮತ್ತು ಬೇರೆ ಬೇರೆ ವೇಷ ಧರಿಸಿ ರಾತ್ರಿಯ ವೇದಿಕೆಯಲ್ಲಿ ಪ್ರದರ್ಶಿಸುತ್ತಾರೆ. ನಂತರ ಜಳಕ ಮಾಡಿ ಅದನ್ನು ತೆಗೆಯುತ್ತಾರೆ. ಈ ವೇಷವನ್ನು ಹರಕೆ ರೂಪದಲ್ಲಿ ಮಾಡುತ್ತಾರೆ.
ನಮ್ಮ ಪೊಳಲಿ ದಸರಾವು ಆಕರ್ಷಣೀಯ ರೂಪದಲ್ಲಿ ನಡೆಯುತ್ತದೆ. ನಮ್ಮ ಪೊಳಲಿ ದಸರದಲ್ಲಿ ಅತ್ಯಂತ ಪ್ರಸಿದ್ಧಿ ಆದದ್ದು ಹುಲಿ ವೇಷ. ನಮ್ಮದೇ ಊರಿನ ತಂಡವಾದ ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಈ ತಂಡವು ಹುಲಿ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ.


-ನಿರೀಕ್ಷಾ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article