ಇಂದಿಗೂ, ಹಿಂದಿನ ಸಂಸ್ಕೃತಿಯನ್ನು ನೆನಪಿಸುವುದು ನಮ್ಮೂರ ದಸರಾ
ದಸರಾ ದಿನದಂದು ಮಹಿಷಾಸುರನನ್ನು 10 ದಿನಗಳ ಯುದ್ಧದ ನಂತರ ದುರ್ಗಾದೇವಿಯು ಸಂಹಾರ ಮಾಡಿದಳು. ಮತ್ತು ಭಗವಾನ್ ರಾಮನು ರಾವಣನನ್ನು ಕೊಂದು ಸೀತೆಯನ್ನು ರಕ್ಷಿಸಿದನು. ಹಾಗಾಗಿ ಈ ದಿನದಂದು ಶಾಸ್ತ್ರ ಪೂಜೆ, ದುರ್ಗಾ ಪೂಜೆ, ರಾಮ ಪೂಜೆ ಮತ್ತು ಸೆಮಿ ಪೂಜೆ ಮಾಡುವ ಪದ್ಧತಿಯು ಈಗಲೂ ಆಚರಣೆಯೊಂದಿಗೆ ದಸರಾ ಹಬ್ಬವು ನಡೆಯುತ್ತಾ ಬಂದಿದೆ.
ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಈ ಒಂಬತ್ತು ದಿನಗಳ ಕಾಲ ಇಡಿ ದೇವಸ್ಥಾನದ ಆವರಣವನ್ನು ಸ್ವಚ್ಛ ಮತ್ತು ಸುಂದರಗೊಳಿಸಿ ಅಲಂಕರಿಸಿರುತ್ತಾರೆ. ವಿಶೇಷವಾದ ಸ್ವಾಗತವನ್ನು ನಡೆಸುತ್ತಾರೆ, ಇಲ್ಲಿ ಹೆಚ್ಚಿನ ಭಕ್ತಾದಿಗಳೊಂದಿಗೆ ಜನರು ದೂರದ ಪ್ರದೇಶಗಳಿಂದ ಆಗಮಿಸುತ್ತಾರೆ. ದೇವಿಯು ೯ ದಿನಗಳ ಕಾಲ ವಿವಿಧ ಸೀರೆಗಳಿಂದ ಮತ್ತು ಒಡವೆ ಮತ್ತು ಹೂಗಳಿಂದ ವಿಜೃಂಭಿಸುತ್ತಿರುತ್ತಾಳೆ. ಹಾಗೆ ರಾತ್ರಿ ಸಮಯದಲ್ಲಿ ವಿವಿಧ ಬಗೆಯ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿರುತ್ತಾರೆ. ವಿಶೇಷವಾದ ಸಿಹಿತಿಂಡಿ ಮತ್ತು ಭಕ್ಷಭೋಜನಗಳಿಂದ ಭಕ್ತರನ್ನು ಸೆಳೆಯುತ್ತದೆ.
ನವರಾತ್ರಿ-ನವದಿನಗಳು:
1. ಬಿಳಿಸೀರೆ-ಶೈಲ ಪುತ್ರಿ
2. ಕೆಂಪು ಸೀರೆ-ಬ್ರಹ್ಮಚಾರಿಣಿ
3. ರಾಯಲ್ ನೀಲಿ-ಚಂದ್ರಘಂಟಾ
4. ಹಳದಿ ಸೀರೆ-ಕುಶ್ಮಾಂಡ
5. ಹಸಿರು ಸೀರೆ-ಸ್ಕಂದಮಾತಾ
6. ಬೂದು ಸೀರೆ-ಕತ್ಸಾಯಣಿ
7. ಕಿತ್ತಳೆ ಬಣ್ಣ-ಕಾಳರಾತ್ರಿ
8. ನವಿಲು ಹಸಿರುಸೀರೆ-ಮಹಾಗೌರಿ
9. ಗುಲಾಬಿ ಬಣ್ಣ-ಸಿದ್ದಿರಾತ್ರಿ ಈ ದಿನವನ್ನು ಸಿದ್ಧಿರಾತ್ರಿ ಅವತಾರವನ್ನು ತೆಗೆದುಕೊಳ್ಳುತ್ತಾರೆ.
ದುಷ್ಟತನವನ್ನು ರಾವಣನ ಪ್ರತಿಕೃತಿಗಳನ್ನು ಸುಡಲಾಗುತ್ತದೆ ಅದೃಷ್ಟರ ಸಂಹಾರವನ್ನು ವಿಜಯದಶಮಿ ನಂತರ ೨೦ ದಿನಗಳ ನಂತರ ಆಚರಿಸಲಾಗುವ ದೀಪಾವಳಿಯ ಹಬ್ಬದ ತಯಾರಿಯನ್ನು ಈ ಹಬ್ಬವು ಪ್ರಾರಂಭಿಸುತ್ತದೆ.
ಭಾರತದ ಹೆಚ್ಚಿನ ಭಾಗಗಳಲ್ಲಿ ದಸರಾ ಹಬ್ಬವನ್ನು ೧೦ ದಿನಗಳ ಕಾಲ ರಾಮನ ಗೌರವ ವಾರ್ಥವಾಗಿ ಆಚರಿಸಲಾಗುತ್ತಿದೆ. ವಿವಿಧ ಪ್ರದೇಶಗಳಲ್ಲಿ ದಸರಾ ಹಬ್ಬವನ್ನು ವಿವಿಧ ಬಗೆಯಲ್ಲಿ ಆಚರಿಸಲಾಗುತ್ತಿದೆ. ಹಾಗೆಯೇ ಆಚರಣೆಗಳು ದುರ್ಗೆಯನ್ನು ಪೂಜಿಸುವುದು, ದೇವಾಲಯಗಳು ಮತ್ತು ಮೈಸೂರಿನಂತಹ ಕೋಟೆಗಳನ್ನು ಅಂಗೀಕರಿಸಿ ಬೆಳಗಿಸುವುದು. ಅದರೊಂದಿಗೆ ವರ್ಣ ರಂಜಿತ ಪ್ರತಿಭೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮ ನಡೆಯುವುದರಿಂದ ಅನೇಕರು ಭಾಗವಹಿಸುವುದು ವಿಶೇಷ.
-ದೀಪಾ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.
