ಬಿಜೆಪಿ ಕಾರ್ಯಕರ್ತರ ಉತ್ಸಾಹ ಶ್ಲಾಘನೀಯ: ಭಗವಂತ ಖೂಬಾ

ಬಿಜೆಪಿ ಕಾರ್ಯಕರ್ತರ ಉತ್ಸಾಹ ಶ್ಲಾಘನೀಯ: ಭಗವಂತ ಖೂಬಾ

ಮಂಗಳೂರು: ಬಿಜೆಪಿ ಸದಸ್ಯತಾ ಅಭಿಯಾನದಲ್ಲಿ ಇಲ್ಲಿನ ಬಿಜೆಪಿ ಕಾರ್ಯಕರ್ತರು ಹಾಗೂ ಎಲ್ಲಾ ಮಂಡಲಗಳಲ್ಲಿ ಸಂಘಟಿತರಾಗಿ ಈ ಸದಸ್ಯತಾ ಅಭಿಯಾನದಲ್ಲಿ ಪಾಲ್ಗೊಂಡಿರುವುದು ಹಾಗೂ ತಾವು ಹೆಚ್ಚು ಸದಸ್ಯರನ್ನಾಗಿ ಸೇರಿಸುವುದಕ್ಕಾಗಿ ಇರುವ ತುಡಿತ ಹಾಗೂ ಪೈಪೋಟಿಯ ನೆಲೆಯಲ್ಲಿ ಕಾರ್ಯವನ್ನು ಕಂಡು ಅತೀವ ಸಂತಸವಾಗಿದೆ ಎಂದು ಕೇಂದ್ರ ಸರ್ಕಾರದ ಮಾಜಿ ಸಚಿವ ಭಗವಂತ ಖೂಬಾ ಹೇಳಿದರು.
ಅವರು ಇಂದು ದ.ಕ. ಜಿಲ್ಲಾ ಕಚೇರಿಯಲ್ಲಿ ನಡೆದ ಬಿಜೆಪಿ ಸದಸ್ಯತಾ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವೀಕ್ಷಕರಾಗಿ ಪಾಲ್ಗೊಂಡು ಮಾತನಾಡಿದರು.
ಜಿಲ್ಲಾಧ್ಯಕ್ಷ ಸತೀಶ್ ಕುಂಪಲರವರು ಹಾಗೂ ಸುಳ್ಯದ ಶಾಸಕಿ ಭಾಗಿರಥಿ ಮರುಳ್ಯ, ಮ.ನ.ಪಾ. ಮೇಯರ್ ಮನೋಜ್ ಕೋಡಿಕಲ್ ಉಪಮೇಯರ್ ಭಾನುಮತಿ, ಪ್ರಧಾನಕಾರ್ಯದರ್ಶಿಯಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಕಿಶೋರ್ ಕುಮಾರ್ ಬೊಟ್ಯಾಡಿ, ಜಿಲ್ಲಾ ಉಪಾಧ್ಯಕ್ಷರುಗಳು, ಜಿಲ್ಲಾ ಕಾರ್ಯದರ್ಶಿಗಳು, ಪ್ರಮುಖರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article