ಸುತ್ತೋಲೆ ತಕ್ಷಣ ಹಿಂಪಡೆಯಲು ಆಗ್ರಹ
ಮಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಹೊರಡಿಸಿರುವ ಪ್ರಾಯೋಗಿಕ ಪರೀಕ್ಷೆ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ನಿಯೋಜಿಸುವ ಬಗ್ಗೆ ಸುತ್ತೋಲೆಯನ್ನು ತಕ್ಷಣ ಹಿಂಪಡೆಯಬೇಕೆಂದು ಕರ್ನಾಟಕರಾಜ್ಯ ಖಾಸಗಿ ಅನುದಾನರಹಿತ ಪ.ಪೂ. ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟವು ಸರಕಾರವನ್ನು ಆಗ್ರಹಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅ.1ರಂದು 2025ನೇ ಸಾಲಿನ ದ್ವಿತೀಯ ಪಿಯುಸಿ ಪ್ರಯೋಗಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಯಾದೃಚ್ಛೀಕರಿಸುವ ಬಗ್ಗೆ ಈಗಾಗಲೇ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ. ಈ ಸುತ್ತೋಲೆಯು ಅವೈಜ್ಞಾನಿಕವಾಗಿದ್ದು ಮತ್ತು ಈ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಈ ರೀತಿಯ ನಿರ್ಣಯಗಳನ್ನು ಇಲಾಖೆಯು ಜಾರಿಗೊಳಿಸಿದರೆ ಅದು ವಿದ್ಯಾರ್ಥಿಗಳ ಹಿತದೃಷ್ಟಿಗೆ ವಿರುದ್ಧವಾರುತ್ತದೆ. ಹಿಂದಿನ ಶೈಕ್ಷಣಿಕ ವರ್ಷ ಇದ್ದಂತೆ ಪ್ರಾಯೋಗಿಕ ಪರೀಕ್ಷೆಯು ಆಯಾಯ ಕಾಲೇಜುಗಳ ಉಸ್ತುವಾರಿಯಲ್ಲಿ ಬಾಹ್ಯ ಪರೀಕ್ಷಾ ವೀಕ್ಷಕರು ಸಸೂತ್ರವಾಗಿ ನಡೆಸಿಕೊಂಡು ಬರುತ್ತಿದ್ದು ಈಗ ಶೈಕ್ಷಣಿಕ ವರ್ಷದ ನಡುವೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯಮಂಡಳಿಯ ಸಬಂಧಪಟ್ಟ ಯಾರೊಂದಿಗೂ ಯಾವುದೇ ರೀತಿಯ ಚರ್ಚೆಯನ್ನು ನಡೆಸದೆ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಯನ್ನು ಆಯಾಯ ಕಾಲೇಜಿನ ವಿದ್ಯಾರ್ಥಿಗಳು ಆಯಾಯ ಕಾಲೇಜುಗಳಲ್ಲಿ ಪರೀಕ್ಷೆಯನ್ನು ಬರೆಯದೇ ಇತರ ಪರೀಕ್ಷಾ ಕೇಂದ್ರಗಳ ಕಾಲೇಜುಗಳಿಗೆ ಹೋಗಿ ಅಲ್ಲಿ ಪರೀಕ್ಷೆ ಬರೆಯುವಂತೆ ಸುತ್ತೋಲೆಯನ್ನು ಹೊರಡಿಸುವ ಮೂಲಕ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ, ಶಿಕ್ಷಣ ಸಂಸ್ಥೆಗಳಿಗೆ ಆಘಾತವನ್ನು ನೀಡಿದೆ. ಪ್ರಾಯೋಗಿಕ ಪರೀಕ್ಷೆಗಳು ನಡೆಯುವಾಗ ವಿದ್ಯಾರ್ಥಿಗಳ ಹೆಸರುಆಲ್ಪಬೆಟ್‌ನ ಪ್ರಕಾರದಲ್ಲಿಆಯ್ಕೆಯಾಗುತ್ತದೆ ಆಗಬೇರೆ ಬೇರೆ ತರಗತಿಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆದಿನಾಂಕಗಳು ಬೇರೆಬೇರೆಯೇಇರುತ್ತದೆ. ಈ ಸಂದಂರ್ಭದಲ್ಲಿ ಇತರ ವಿದ್ಯಾರ್ಥಿಗಳು ಏನು ಮಾಡುವುದು ಅಲ್ಲದೆ ತರಗತಿಗಳನ್ನು ಹೇಗೆ ನಡೆಸುವುದು ಎಂಬ ಬಗ್ಗೆ ಪ್ರಶ್ನೆ ಕಾಡುತ್ತದೆ.
ಇದೇ ಸಮಯದಲ್ಲಿಜೆಇಇ ಮೈನ್‌ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತವೆ. ಆಗ ಪ್ರಾಯೋಗಿಕ ಪರೀಕ್ಷೆಗಳು ಬೇರೆ ಕಾಲೇಜುಗಳಲ್ಲಿ ನಡೆದರೆ ಈ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ಹೋಗಿ ಬರುವ ಸಮಯ ವ್ಯರ್ಥವಾಗುತ್ತದೆ. ವಿದ್ಯಾರ್ಥಿಗಳು ಆಯಾಯ ಶೈಕ್ಷಣಿಕ ವಾತಾವರಣಕ್ಕೆ ಹೊಂದಿಕೊಂಡಿದ್ದು ಪಾಯೋಗಿಕ ಪರೀಕ್ಷೆಗೆಇತರ ಕಾಲೇಜುಗಳಿಗೆ ಹೋಗಬೇಕೆಂದಾಗಅವರಿಗೆ ಮಾನಸಿಕ ತಳಮಳ ಮತ್ತುಅವರು ಹೋಗುವ ಕಾಲೇಜುಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸುವಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೇಇರುವುದು ಹಾಗೂ ಪ್ರಯೋಗಾಲಕ್ಕೆ ಬೇಕಾಗುವ ಉಪಕರಣಗಳ ಕೊರತೆ, ಪ್ರಯಾಣದ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು/ಗೊಂದಲಗಳು ಇಲ್ಲಿವೆ. ಅಂತೆಯೇ ಈ ಪರೀಕ್ಷೆಯನ್ನು ಏಕ ಕಾಲದಲ್ಲಿ ನಡೆಸಲು ಸಾಧ್ಯವಾಗುವುದಿಲ್ಲ. ಯಾವುದೇರೀತಿಯ ಪೂರ್ವ ತಯಾರಿಗಳು/ ಸಲಹೆ ಸೂಚನೆಗಳು ಇಲ್ಲದೇಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಹೊರಡಿಸಿರುವ ಪ್ರಾಯೋಗಿಕ ಪರೀಕ್ಷೆ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ನೀಯೋಜಿಸುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಿರುವುದು ಅವೈಜ್ಞಾನಿಕವಾಗಿದ್ದು, ತಕ್ಷಣವೇ ಈ ಸುತ್ತೋಲೆಯನ್ನು ಹಿಂಪಡೆಯಬೇಕೆಂದು ವಿದ್ಯಾರ್ಥಿಗಳ/ಪೋಷಕರ ಪರವಾಗಿಕರ್ನಾಟಕರಾಜ್ಯ ಖಾಸಗಿ ಅನುದಾನರಹಿತ ಪಪೂ ಕಾಲೇಜುಗಳ ಆಡಳಿತ ಮಂಡಳಿಯು ಆಗ್ರಹಿಸುತ್ತದೆ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್. ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.