ಅಡಿಕೆ ಧಾರಣೆ ಇಳಿಕೆ: ಕ್ಯಾಂಪ್ಕೋ ಸ್ಪಷ್ಟನೆ

ಅಡಿಕೆ ಧಾರಣೆ ಇಳಿಕೆ: ಕ್ಯಾಂಪ್ಕೋ ಸ್ಪಷ್ಟನೆ


ಮಂಗಳೂರು: ಅಡಿಕೆ ಧಾರಣೆ ಇಳಿಕೆಯಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ಅನಾವಶ್ಯಕ ಗೊಂದಲಗಳಿಂದ ಕೂಡಿದ ವರದಿ ಪ್ರಕಟವಾಗಿದ್ದು, ಆಡಿಕೆ ಬೆಳೆಗಾರರ ಆತ್ಮ ಸೈರ್ಯ ಕುಗ್ಗಿಸುವ ಹೇಳಿಕೆಯನ್ನು ಕೊಡುವುದನ್ನು ಕ್ಯಾಂಪ್ಕೋ ಸಂಸ್ಥೆ ಖಂಡಿಸುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.

ಉತ್ತರ ಭಾರತದಲ್ಲಿ ನಮ್ಮ ಚಾಲಿ ಅಡಿಕೆಗೆ ಉತ್ತಮ ಬೇಡಿಕೆ ಇದ್ದು, ಧಾರಣೆ ಕುಸಿಯುವ ಯಾವ ಕಾರಣವು ಇಲ್ಲ, ಹಾಗೂ ಕ್ಯಾಂಪ್ಕೋ ಅಡಿಕೆ ಬೆಳೆಗಾರರ ಹಿತ ಕಾಪಾಡುವಲ್ಲಿ , ಹಾಗೂ ಪ್ರಾಮಾಣಿಕ ಸೇವೆ ನೀಡುವಲ್ಲಿ ಕಟಿಬದ್ಧರಾಗಿದ್ದೇವೆ. ಅಡಿಕೆ ಸೇಟುಗಳು ಹಾಗೂ ವ್ಯಾಪಾರಿಗಳಿಗೆ ಅವರ ಹಿತಾಸಕ್ತಿ ಮುಖ್ಯವೇ ಹೊರತು ರೈತರ ಕಾಳಜಿ ಇರುವುದಿಲ್ಲ. ಅವರುಗಳು ಹೇಳಿದಂತೆ, ವಿದೇಶಿ ಅಡಿಕೆ ಗುಣಮಟ್ಟದಲ್ಲಿಯಾಗಲಿ, ದರದಲ್ಲಿಯೂ ನಮ್ಮ ಅಡಿಕೆಗೆ ಸರಿಸಾಟಿ ಅಲ್ಲ. ಅಡಿಕೆ ಬೆಳೆಗಾರರು ಯಾವೂದೇ ಕಾರಣಕ್ಕೆ ಈ ವದಂತಿಗಳಿಗೆ ಮಣಿಯದೇ, ತಮಗೆ ಅಗತ್ಯವಿರುವಷ್ಟು ಅಡಿಕೆಯನ್ನು ಹಂತ ಹಂತವಾಗಿ ಕ್ಯಾಂಪ್ಕೋ ಸಂಸ್ಥೆ , ಹಾಗೂ ಸಹಕಾರಿ ಸಂಸ್ಥೆಗಳಿಗೆ ಮಾರಾಟ ಮಾಡುವಂತೆ ವಿನಂತಿಸಿದ್ದಾರೆ. 

ಈಗಾಗಲೆ ಚೋಲ್ ಅಡಿಕೆ ದರ ಹೆಚ್ಚಾಗಿದ್ದು, ಮಳೆಯಿಂದಾಗಿ ಹೊಸ ಅಡಿಕೆ ಗುಣಮಟ್ಟ ಸುಧಾರಣೆ ಆದಾಗ ಇನ್ನು ಹೆಚ್ಚಿನ ದರ ನಮ್ಮ ರೈತರಿಗೆ ಖಂಡಿತಾ ಸಿಗುತ್ತದೆ ಎಂಬ ಬರವಸೆ ನೀಡುತ್ತೇನೆ. ದಯವಿಟ್ಟು ರೈತರು ಯಾವೂದೇ ಕಾರಣದಿಂದ ತಮ್ಮ ಹೆಸರಿನಲ್ಲಿ ವ್ಯಾಪಾರಿಗಳ ಕಳಪೆ ಗುಣಮಟ್ಟದ ಅಡಿಕೆಯನ್ನು ತಮ್ಮ ಉತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಮಿಕ್ಸ ಮಾಡಿ ಸಂಸ್ಥಗೆ ನೀಡಬಾರದಾಗಿ ಅವರು ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article