ಬಿಲ್ಡರ್‌ಗೆ ಹಲ್ಲೆಗೆ ಯತ್ನ: ಇಬ್ಬರ ಸೆರೆ

ಬಿಲ್ಡರ್‌ಗೆ ಹಲ್ಲೆಗೆ ಯತ್ನ: ಇಬ್ಬರ ಸೆರೆ


ಮಂಗಳೂರು: ನಗರದ ಹೆಸರಾಂತ ಬಿಲ್ಡರ್ಸ್ ಸಂಸ್ಥೆಯ ಪಾಲುದಾರರ  ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದ್ದು ಇಬ್ಬರು ಯುವಕರನ್ನು ಬರ್ಕೆ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. 

ನಗರದಲ್ಲಿ ಎನ್‌ಎಸ್ ಯುಐ ಕಾರ್ಯಕರ್ತನಾಗಿರುವ ಅನುಷ್ ಶೆಟ್ಟಿ ಮತ್ತು ಕದ್ರಿ ನಿವಾಸಿ ಅಂಕಿತ್ ಶೆಟ್ಟಿ ಬಂಧಿತರು. ಅನುಷ್ ಶೆಟ್ಟಿ ಕಳೆದ ಚುನಾವಣೆ ಸಂದರ್ಭದಲ್ಲಿ ನೋಟಾ ಪರವಾಗಿ ಅಭಿಯಾನ ನಡೆಸಿದ್ದ. 

ಬಿಲ್ಡರ್ ಬುಧವಾರ ಸಂಜೆ ವಿಮಾನ ನಿಲ್ದಾಣ ಕಡೆಯಿಂದ ತನ್ನ ಆಡಿ ಕಾರಿನಲ್ಲಿ ಬಂದಿದ್ದು ಈ ವೇಳೆ ಯುವಕರಿದ್ದ ಕಾರನ್ನು ಓವರ್ ಟೇಕ್ ಮಾಡಿಕೊಂಡು ಬಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಹಿಂಬಾಲಿಸಿಕೊಂಡು ಬಂದಿದ್ದ ಯುವಕರು, ಬಿಲ್ಡರ್ ಕೊಡಿಯಾಲಬೈಲಿನ ತನ್ನ ಮನೆಗೆ ತಲುಪಿದಾಗ, ಅವಾಚ್ಯವಾಗಿ ನಿಂದಿಸಿ ಮನೆಯ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಅಲ್ಲದೆ, ಕಾರನ್ನು ಕಾಂಪೌಂಡ್ ಒಳಗಡೆ ತಂದು ಬಿಲ್ಡರ್ ಮತ್ತು ಅವರ ಪತ್ನಿಯ ಮೇಲೆ ಕೈಮಾಡಲು ಯತ್ನಿಸಿದ್ದಾರೆ. ಕೂಡಲೇ ಬಿಲ್ಡರ್ ಬರ್ಕೆ ಠಾಣೆಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಸ್ಥಳದಿಂದಲೇ ಇಬ್ಬರನ್ನು ಬಂಧಿಸಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article