ಮಂಗಳೂರು ದಸರಾಗೆ ಅಡ್ಡಿ ಪಡಿಸಿದ ಅಕಾಲಿಕ ಮಳೆ
ಮಂಗಳೂರು: ನವರಾತ್ರಿಯ ಸಂಭ್ರಮದಲ್ಲಿರುವ ಮಂಗಳೂರು ಜನತೆಗೆ ಅಕಾಲಿಕ ಮಳೆ ಕಂಟಕವಾಗಿ ಪರಿಣಮಿಸಿದೆ.
ಶುಕ್ರವಾರ ಮಧ್ಯಾಹ್ನದಿಂದ ಮೋಡಕವಿದ ವಾತಾವರಣವಿದ್ದು, ರಾತ್ರಿ 1 ಗಂಟೆಯ ವೇಳೆಗೆ ಧಾರಾಕಾರ ಮಳೆ ಸುರಿಯಲು ಪ್ರಾರಂಭಿಸಿದ್ದು, ನಿರಂತರವಾಗಿ 2 ಗಂಟೆಗೂ ಹೆಚ್ಚ ಕಾಲ ಮಳೆಯಾಗಿದ್ದು, ಜಾತ್ರೆಯ ವೈಭವವನ್ನು ನೆರೆದಿದ್ದ ಜನತೆ ಕಂಗಾಲಾಗಿದ್ದು, ಅಂಗಡಿಗಳು, ಬಸ್ ನಿಲ್ದಾಣವನ್ನು ಆಶ್ರಹಿಸುವ ಸನ್ನಿವೇಶ ಎದುರಾಯಿತಲ್ಲದೇ, ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡಲು ಒಂದೆಡೆ ಪರದಾಡಿದರೆ ಮತ್ತೊಂದೆಡೆ ತಮ್ಮ ವಸ್ತುಗಳನ್ನು ಉಳಿಸಿಕೊಳ್ಳಲು ಚಡಪಡಿಸಿದರು.
ನಗರದಲ್ಲಿ ಗುರುವಾರ, ಶುಕ್ರವಾರ ಹಾಗೂ ಶನಿವಾರ ವಾಹನಗಳಿಗೆ ಪೂಜೆ ನಡೆಯುತ್ತಿದ್ದು, ಬೇರೆ ಬೇರೆ ಊರುಗಳಿಂದ ಹೊಟ್ಟೆಪಾಡಿಗಾಗಿ ಹೂವನ್ನು ತಂದು ಮಾರುತ್ತಿದ್ದು, ವಿಪರೀತ ಮಳೆಗೆ ಅಪಾರ ಹೂವು ಹಾನಿಯಾಗಿದೆ.
ಶನಿವಾರವೂ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಇದರಿಂದಾಗಿ ಜನ ಸಂಚಾರ ವಿರಳವಾಗಿದ್ದು, ಜಾತ್ರೆ ತಿರುಗುವ ಹುಮ್ಮಸ್ಸಿನಲ್ಲಿದ್ದ ಜನತೆ ಈ ವಾಆತಾವರಣದಿಂದಾಗಿ ಮನೆಯಿಂದ ಹೊರಬರಲು ಯೋಚಿಸುವಂತಾಗಿದೆ.
ನಗರದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ, ಮಂಗಳದೇವಿ ದೇವಸ್ಥಾನ, ಊರ್ವ ಮಾರಿಗುಡಿ ದೇವಸ್ಥಾನ, ಮಾರಿಯಮ್ಮ ದೇವಸ್ಥಾನಗಳಲ್ಲಿ ಬೇರೆ ದಿನಗಳಿಗಿಂತ ಇಂದು ಜನಸಂದಣ ವಿರಳವಾಗಿತ್ತು.