ಎಡಿಜಿಪಿ ವಿರುದ್ಧ ಕ್ರಮಕ್ಕೆ ಜೆಡಿಎಸ್ ಮನವಿ
Friday, October 4, 2024
ಮಂಗಳೂರು: ಕೇಂದ್ರ ಸರಕಾರದ ಬೃಹತ್ ಉಕ್ಕು ಮತ್ತು ಗಣಿ ಸಚಿವ ಎಚ್.ಡಿ.ಕುಮಾರಸ್ವಾಮಿಯನ್ನು ಕರ್ನಾಟಕ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರು ಅಸಹನೀಯ ಪದ ಬಳಕೆ ಮಾಡಿ ಅವಮಾನಗೊಳಿಸಿರುವುದನ್ನು ದ.ಕ.ಜಿಲ್ಲಾ ಜನತಾದಳ ಹಾಗೂ ಯುವ ಜನತಾದಳ(ಎಸ್) ತೀವ್ರವಾಗಿ ಖಂಡಿಸಿದೆ.
ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದುಕೊಂಡು ದುರುದ್ದೇಶದಿಂದ ಅವಮಾನಗೊಳಿಸಿರುವ ಕರ್ನಾಟಕ ಲೋಕಾ ಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದ.ಕ.ಜಿಲ್ಲಾ ಜನತಾದಳ (ಎಸ್) ಅಧ್ಯಕ್ಷ ಜಾಕೆ ಮಾಧವ ಗೌಡ ನೇತೃತ್ವದ ನಿಯೋಗವು ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದೆ.
ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ವಸಂತ ಪೂಜಾರಿ, ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ, ಕಾರ್ಯಾಧ್ಯಕ್ಷ ಇಕ್ಬಾಲ್ ಮುಲ್ಕಿ, ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷ ರತೀಶ್ ಕರ್ಕೇರ ಹಾಗೂ ಜಿಲ್ಲಾ ಸಂಘಟನಾ ಉಸ್ತುವಾರಿ ಧನರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿತೇಶ್ ರೈ ಹಾಗೂ ಯುವ ಪಧಾದಿಕಾರಿಗಳಾದ ನಿತೇಶ್ ಪೂಜಾರಿ, ವಿನಿತ್, ರಿನಿತ್, ನಿಶಾಂತ್, ಆದರ್ಶ ಸುಧಾಕರ್ , ಸುಶಾಂತ್,ಜಯದೀಪ್ , ಪುತ್ತು ಮೋನು ಮೊದಲಾದವರಿದ್ದರು.