ಪ್ರವಾಸಿ ಕಾರ್ಯಕರ್ತರ ಸಂಯುಕ್ತ ಸಭೆಯಲ್ಲಿ ಶಾಸಕ ಕಾಮತ್ ಭಾಗಿ
Saturday, October 26, 2024
ಮಂಗಳೂರು: ಮುಂಬರಲಿರುವ ಮಹಾರಾಷ್ಟ್ರ ಚುನಾವಣೆಯ ಅಂಗವಾಗಿ ಪ್ರವಾಸಿ ಕಾರ್ಯಕರ್ತರ ಸಂಯುಕ್ತ ಸಭೆಯು ಪುಣೆಯ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದಿದ್ದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಭಾಗವಹಿಸಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷ ವಹಿಸಿರುವ ಜವಾಬ್ದಾರಿಯಂತೆ ಪುಣೆಗೆ ತೆರಳಿರುವ ಅವರು ಪ್ರಸ್ತುತ ಭಾರತೀಯ ಜನತಾ ಪಾರ್ಟಿಗೆ ಪುಣೆ ಸೇರಿದಂತೆ ಇಡೀ ರಾಜ್ಯದಲ್ಲಿ ಪೂರಕ ವಾತಾವರಣವಿದ್ದು ಮತ್ತೆ ನಮ್ಮ ಪಕ್ಷ ಪೂರ್ಣ ಬಹುಮತದಿಂದ ಅಧಿಕಾರಕ್ಕೇರುವುದು ಖಚಿತ. ಆ ನಿಟ್ಟಿನಲ್ಲಿ ಪಕ್ಷದ ಮಾರ್ಗದರ್ಶನದಂತೆ ನಾವೆಲ್ಲರೂ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಾಯಕರ ಜೊತೆಗೆ ಕರ್ನಾಟಕದ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.



