ರೈಲು ಭೋಗಿಯೊಳಗೆ ಪ್ರಜ್ಞಾಹಿನ ಸ್ಥಿತಿಯಲ್ಲಿ ಪ್ರಯಾಣಿಕ ಸಾವು
Friday, October 25, 2024
ಉಡುಪಿ: ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ನಿಲುಗಡೆ ಪಡೆದ ರೈಲಿನ ಬೋಗಿಯೊಳಗೆ ಪ್ರಜ್ಞಾಹಿನ ಸ್ಥಿತಿಯಲ್ಲಿದ್ದ ಪ್ರಯಾಣಿಕ ಶುಕ್ರವಾರ ಸಾವನ್ನಪ್ಪಿದ್ದಾನೆ.
ಆತನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಸಾವು ಸಂಭವಿಸಿರುವುದನ್ನು ವೈದ್ಯರು ಪ್ರಕಟಿಸಿದರು. ಇಂದು ಶುಕ್ರವಾರ ನಡೆದಿದೆ. ಮೃತ ದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವ ರಕ್ಷಣಾ ಕೇಂದ್ರದಲ್ಲಿ ರಕ್ಷಿಸಿಡಲಾಗಿದೆ. ಮೃತ ವ್ಯಕ್ತಿಯ ವಾರೀಸುದಾರರು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ವಿನಂತಿಸಲಾಗಿದೆ.
ಬೆಂಗಳೂರಿನಿಂದ ಕಾರವಾರಕ್ಕೆ ತೆರಳುವ ರೈಲಿನಲ್ಲಿ ಈ ಘಟನೆ ನಡೆದಿದೆ.