ಎಂ.ಆರ್.ಪಿ.ಎಲ್. ಮತ್ತು ಮಾಂಡೋವಿ ಮೋಟರ್ಸ್ ಸಂಯೋಜನೆಯಲ್ಲಿ ಎಂ.ಆರ್.ಪಿ.ಎಲ್. ಹೈಕ್ಯೂ ಮೈಲೇಜ್ ಚಾಲೇಂಜ್ ಕಾರ್ಯಕ್ರಮ
ಮಂಗಳೂರು: ಒ.ಎನ್.ಜಿ.ಸಿ.ಯ ಅಂಗ ಸಂಸ್ಥೆಯಾದ ಎಂ.ಆರ್.ಪಿ.ಎಲ್. ಉತ್ತಮ ಗುಣಮಟ್ಟದ ಇಂಧನವನ್ನು ರಾಜ್ಯದಲ್ಲಿ ಮಾತ್ರವಲ್ಲ ದೇಶದ ಜನತೆಗೆ ನೀಡುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಇದೆ ಎಂದು ಎಂ.ಆರ್.ಪಿ.ಎಲ್.ನ ಗ್ರೂಪ್ ಜನರಲ್ ಮ್ಯಾನೇಜರ್ ಸುಭಾಷ್ ಪೈ ಹೇಳಿದರು.
ಅವರು ಮಂಗಳೂರಿನ ಕದ್ರಿಯಲ್ಲಿನ ಸಂಸ್ಥೆಯ ಪೆಟ್ರೋಲ್ ಪಂಪ್‌ನಲ್ಲಿ ಎಂ.ಆರ್.ಪಿ.ಎಲ್. ಮತ್ತು ಮಾಂಡೋವಿ ಮೋಟರ್ಸ್ ಸಂಯೋಜನೆಯಲ್ಲಿ ನಡೆದ ಎಂ.ಆರ್.ಪಿ.ಎಲ್. ಹೈಕ್ಯೂ ಮೈಲೇಜ್ ಚಾಲೇಂಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕದಲ್ಲಿ ಅತೀ ದೊಡ್ಡ ಸಂಸ್ಥೆ ಎಂ.ಆರ್.ಪಿ.ಎಲ್ ಆಗಿದ್ದು, ಒಂದು ಮಾದರಿ ಸಂಸ್ಥೆಯಾಗಿದೆ. ಈ ಕಾರ್ಯಕ್ರಮದಿಂದ ಜನರಲ್ಲಿ ಇಂಧನದ ಸಂರಕ್ಷಣೆ ಮತ್ತು ವಾಹನ ಚಾಲನೆಯಲ್ಲಿ ಜಾಗೃತಿ ಉಂಟಾಗುತ್ತದೆ, ಸಂಸ್ಥೆ ಸಾಮಾಜಿಕ ಕಾರ್ಯಗಳಲ್ಲಿ ಕೂಡ ತೊಡಗಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎಂದರು.
ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಸ್ವಾಮಿ ಪ್ರಸಾದ್ ಮಾತನಾಡಿ, ದಕ್ಷಿಣ ಬಾರತದಲ್ಲಿ ಎಂ.ಆರ್.ಪಿ.ಎಲ್.ನ 111 ಪೆಟೋಲ್ ಪಂಪ್ ಚಾಲನೆಯಲ್ಲಿದ್ದು, ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ, ಮುಂದಿನ ದಿನದಲ್ಲಿ ಅಂಧ್ರ ಪ್ರದೇಶಕ್ಕೆ ಕೂಡ ನಮ್ಮ ಪೆಟ್ರೋಲ್ ಪಂಪ್‌ಗಳು ಕಾಲಿಡಲಿದೆ ಸಂಸ್ಥೆಯ ಇಂಧನ ಕ್ವಾಲಿಟಿಯನ್ನು ಗಮನಿಸಿದ ಗ್ರಾಹಕರು ಮತ್ತೆ ಮತ್ತೆ ನಮ್ಮ ಸಂಸ್ಥೆಯ ಇಂಧನವನ್ನು ಬಳಸುತ್ತಿದ್ದಾರೆ, ಗ್ರಾಹಕರು ನಮ್ಮ ಸೇವೆಯನ್ನು ಕೂಡ ಶ್ಲಾಘಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಮಾರು 40 ವಾಹನ ಮಾಲಕರು ಪಾಲ್ಗೊಂಡಿದ್ದರು. ಎಂ.ಆರ್.ಪಿ.ಎಲ್.ನ ಮ್ಯಾನೇಜರ್ ಕಾಶಿನಾಥ್, ಮಂಗಳೂರು ಸ್ಪೋರ್ಸ್ ಅಸೋಶಿಯೇಶನ್‌ನ ಸುಧೀರ್, ಮಾಂಡೋವಿ ಮೋಟರ್ಸ್‌ನ ಎ.ಜಿ.ಎಂ. ಕೃಷ್ಣ ಶೆಟ್ಟಿ, ವರ್ಕ್‌ಶಾಪ್ ಮ್ಯಾನೇಜರ್ ಗ್ರೇಷಿಯನ್ ಪಿಂಟೋ, ಸೇಲ್ಸ್ ಮ್ಯಾನೇಜರ್ ಮುರಳೀಧರ್, ಎಂ.ಆರ್.ಪಿ.ಎಲ್.ನ ಹೈಕ್ಯೂ ಡೀಲರ್ ರಾಘವೇಂದ್ರ ಕಾರ್ವಿ ಮತ್ತಿತರರು ಉಪಸ್ಥಿತರಿದ್ದರು.





