ಅಪಘಾತ: ಮೂರು ಮಂದಿಗೆ ಗಾಯ
Saturday, October 26, 2024
ಮಂಗಳೂರು: ಅ.26 ರಂದು ಮಂಗಳೂರು ನಗರದ ನಂತೂರು ಸಂದೇಶ ಕ್ರಾಸ್ ಬಳಿ ಪಂಪ್‌ವೆಲ್ ಕಡೆಯಿಂದ ನಂತೂರು ಕಡೆಗೆ ಹೋಗುತ್ತಿದ್ದ ಪ್ರವಾಸಿ ಮಿನಿ ಬಸ್ ಅದರ ಎದುರಿನಲ್ಲಿ ಹೋಗುತ್ತಿದ್ದ ಕಾರಿಗೆ ಢಿಕ್ಕಿಯಾಗಿ ಅಪಘಾತವಾಗಿದ್ದು, ಬಸ್ಸು ಪಲ್ಟಿಯಾಗಿ ರಸ್ತೆಗೆ ಬಿದ್ದಿದೆ.
ಬಸ್‌ನಲ್ಲಿ ಇದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹತ್ತು ಜನ ಪ್ರಯಾಣಿಕರಿಗೆ ಸಾದ ಗಾಯಗಳಾಗಿದ್ದು, ಎ.ಜೆ. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.