ವಿದ್ಯಾರ್ಥಿಗಳು ಗಾಂಧೀಜಿ ಮತ್ತು ಲಾಲ್ ಬಹುದೂರ್ ಶಾಸ್ತ್ರೀಯವರವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಿ: ಪ್ರೊ.ರಾಮಚಂದ್ರ ಭಟ್

ವಿದ್ಯಾರ್ಥಿಗಳು ಗಾಂಧೀಜಿ ಮತ್ತು ಲಾಲ್ ಬಹುದೂರ್ ಶಾಸ್ತ್ರೀಯವರವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಿ: ಪ್ರೊ.ರಾಮಚಂದ್ರ ಭಟ್


ಮಂಗಳೂರು: ಗಾಂಧೀಜಿಯವರು ತಮ್ಮ ಬದುಕಿನಲ್ಲಿ ಸರಳತೆ ಮತ್ತು ಅಹಿಂಸೆಯ ಚಿಂತನೆಗಳಿಗೆ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾರೆ ಹಾಗಾಗೀ ಇಂದಿನ ಸಮಾಜಕ್ಕೆ ಇರ್ವರ ವ್ಯಕ್ತಿತ್ವ ಅತೀ ಅಗತ್ಯ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್ ಹೇಳಿದರು.

ಅವರು ಮಂಗಳೂರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಎಕ್ಸ್‌ಪೋಡಿಯಂನಲ್ಲಿ ನಡೆದ ಗಾಂಧಿ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.

ಗಾಂಧೀಜಿಯವರು ದೇಶ ವಿದೇಶಗಳಲ್ಲಿ ಹಲವರಿಗೆ ಆದರ್ಶಪ್ರಾಯರಾಗಿದ್ದು ಅವರ ವ್ಯಕ್ತಿತ್ವ ಅನನ್ಯವಾಗಿದೆ. ಅವರ ಚಿಂತನೆಗಳು ಇಂದು ಎಲ್ಲಡೆ ಹರಡಿದೆ. ತಮ್ಮ ಬದುಕಿನಲ್ಲಿ ದೇಶ ಸೇವೆಗಾಗಿ ಸರಳತೆಯ ಬದುಕನ್ನು ಸಮರ್ಪಿಸಿದರು. ಹಾಗೇ ಇಂದಿನ ಯುವ ಜನಾಂಗ ಕೂಡ ಗಾಂಧೀಜಿಯವರ ಚಿಂತನೆಗಳನ್ನು ಮೈಗೂಡಿಸಿಕೊಂಡು ದೇಶಸೇವೆಯಲ್ಲಿ ಪಾಲ್ಗೊಳಬೇಕು. ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟದಲ್ಲಿ ಗಾಂಧೀಜಿಯವರು ಸರಳತೆ ಮತ್ತು ಸ್ವದೇಶಿ ಚಳುವಳಿಯ ಮೂಲಕ ಮನೆಮಾತಾಗಿ ಇಡೀ ದೇಶವನ್ನು ಸುತ್ತಿ ಜನರಲ್ಲಿ ಒಗ್ಗೂಡಿಸಿ ದೇಶದ ಬಗ್ಗೆ ಜಾಗ್ರತೆಯನ್ನು ಮೂಡಿಸಿದರು. ವಿದ್ಯಾರ್ಥಿಗಳು ಜಾಗತೀಕರಣದಲ್ಲಿ ಗಾಂಧೀಜಿ ಮತ್ತು ಲಾಲ್ ಬಹುದೂರ್ ಶಾಸ್ತ್ರೀಯವರವರ ಚಿಂತನೆಗಳು, ತತ್ವ, ಆದರ್ಶಗಳು ಪರಿಣಾಮಕಾರಿಯಾಗಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ವಿಭಾಗದ ಉಪನ್ಯಾಸಕರಾದ ಕರುಣಾಕರ ಬಳ್ಕೂರು ಅವರು ‘ಗಾಂಧಿ ತಾತ’ ಎಂಬ ಕವನವನ್ನು ವಾಚಿಸಿದರು, ಹಿಂದಿ ವಿಭಾಗ ಉಪನ್ಯಾಸಕರದ ಪ್ರಮೋದ್ ಕಿಣಿ ಅವರು ಗಾಂಧಿಯವರ ವಿಚಾರಧಾರೆಯನ್ನು ತಿಳಿಸಿದರು.

ಕಾರ್ಯಕ್ರಮ ಸಂಯೋಜಕಿ ಅನುಷಾ ಮತ್ತಿತರರು ಉಪಸ್ಥಿತರಿದ್ಧರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article