ಅರಮನೆ ವೆಲ್‌ಫೇರ್ ಹಾಗೂ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಧಕರಿಗೆ ಸನ್ಮಾನ

ಅರಮನೆ ವೆಲ್‌ಫೇರ್ ಹಾಗೂ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಧಕರಿಗೆ ಸನ್ಮಾನ


ಮುಲ್ಕಿ: ಅರಮನೆ ವೆಲ್‌ಫೇರ್ ಹಾಗೂ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮುಲ್ಕಿ ಸೀಮೆ ಅರಮನೆಯಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ ಸಾವಂತರು ವಹಿಸಿ ಮಾತನಾಡಿ, ಸೀಮೆಯ ಅರಮನೆ ವತಿಯಿಂದ ಶಿಕ್ಷಣ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನಡೆಯುತ್ತಿದ್ದು ಸಾಧಕರ ಸಾಧನೆ ನಿರಂತರವಾಗಿರಲಿ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಬಿಗ್‌ಬಾಸ್ ಮತ್ತು ಮೆಟ್ರೋ ಖ್ಯಾತಿಯ ಧ್ವನಿ ಮಾಂತ್ರಿಕ ಪ್ರದೀಪ್ ಬಡೆಕ್ಕಿಲ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಮುಲ್ಕಿ ಅರಮನೆ ವೆಲ್ಫೇರ್ ಟ್ರಸ್ಟ್‌ನ ಗೌತಮ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

ಸಾಧಕರ ನೆಲೆಯಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಅಪ್ಪಣ್ಣ ದೇವಾಡಿಗ, ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಗಣೇಶ್ ದೇವಾಡಿಗ ಪಂಜ ಪಾವಂಜೆ ಹಾಗೂ ವಿಜಯಲಕ್ಷ್ಮಿ ಜನಾರ್ಧನ್ ಪಡುಪಣಂಬೂರು ಅವರನ್ನು ಸನ್ಮಾನಿಸಲಾಯಿತು. ಗೌತಮ್ ಜೈನ್ ಸ್ವಾಗತಿಸಿ, ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article