ಇಂದು ಮಂಗಳೂರಿನಲ್ಲಿ ದಸರಾ ಗೊಂಬೆ: ಪಾರಂಪರಿಕ ವಸ್ತು ಪ್ರದರ್ಶನ

ಇಂದು ಮಂಗಳೂರಿನಲ್ಲಿ ದಸರಾ ಗೊಂಬೆ: ಪಾರಂಪರಿಕ ವಸ್ತು ಪ್ರದರ್ಶನ

ಮಂಗಳೂರು: ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವರ ಆಯೋಜಕತ್ವದಲ್ಲಿ ದಸರಾ ಗೊಂಬೆ ಪ್ರದರ್ಶನ ಮತ್ತು ಪ್ರಾಚ್ಯ ಪಾರಂಪರಿಕ ವಸ್ತುಗಳ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಅ.6 ರಂದು ಮಧ್ಯಾಹ್ನ 2.15ಕ್ಕೆ ಮಂಗಳೂರು ಕದ್ರಿ ಕಂಬಳದ ‘ವಿಶ್ವೇಶತೀರ್ಥ ವೇದಿಕೆ’ ವಾದಿರಾಜ ಮಂಟಪ, ‘ಮಂಜು ಪ್ರಾಸಾದ’ದಲ್ಲಿ ಉದ್ಘಾಟಿಸಿ ದಸರಾ (ನವರಾತ್ರಿ) ಸಂದೇಶವನ್ನು ನೀಡಲಿರುವರು.

ಹರಿಪಾದಗೈದಿರುವ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣೆಯೊಂದಿಗೆ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಷಷ್ಠ್ಯಬ್ದಪೂರ್ತಿ ಸರಣಿ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಂತಹ ದಸರಾ ಗೊಂಬೆ ಪ್ರದರ್ಶನವನ್ನು ಅ.6 ರಿಂದ ಅ.12 ರವರೆಗೆ (ವಿಜಯ ದಶಮಿ) ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article