ತುಳುನಾಡ ಜವನೆರ್ ಬೆದ್ರ ಟ್ರಸ್ಟ್‌ನಿಂದ ಕ್ಯಾನ್ಸರ್ ಚಿಕಿತ್ಸೆಗೆ ಸಹಾಯಧನ
Sunday, October 6, 2024
ಮೂಡುಬಿದಿರೆ: ತುಳುನಾಡ ಜವನೆರ್ ಬೆದ್ರ ಟ್ರಸ್ಟ್ (ರಿ) ಇದರ 2ನೇ ಸೇವಾ ಯೋಜನೆಯನ್ನು ಕ್ಯಾನ್ಸರ್‌ಗೆ ತುತ್ತಾಗಿರುವ ಬೆಳುವಾಯಿ ಶಾಂತಿನಗರ ನಿವಾಸಿ ದೀಪಿಕಾ ಅವರ ಚಿಕಿತ್ಸೆಗಾಗಿ 45,000 ರೂ.ನ ಚೆಕ್‌ನ್ನು ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಅವರ ಮೂಲಕ ಭಾನುವಾರ ಬೆಳಿಗ್ಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ತುಳುನಾಡ ಜವನೆರ್ ಬೆದ್ರದ ಅಧ್ಯಕ್ಷ ಹರೀಶ್ ಕುಲಾಲ್, ಕಾರ್ಯದರ್ಶಿ ಪ್ರಸಾದ್, ಜೊತೆ ಕಾರ್ಯದರ್ಶಿ ಹರಿ ಪ್ರಸಾದ್, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ ಸದಸ್ಯರುಗಳಾದ ಸುಮಂತ್, ಸುರೇಶ್, ಶಿವರಾಜ್, ಪ್ರಸನ್ನ ಉಪಸ್ಥಿತರಿದ್ದರು.