ಬಹುತ್ವವನ್ನು ಸಂಭ್ರಮಿಸುವ ಬದುಕು ನಮ್ಮದಾಗಲಿ: ಪುಂಡರೀಕಾಕ್ಷ

ಬಹುತ್ವವನ್ನು ಸಂಭ್ರಮಿಸುವ ಬದುಕು ನಮ್ಮದಾಗಲಿ: ಪುಂಡರೀಕಾಕ್ಷ


ಮುಡಿಪು: ಸಂವಿದಾನದ ಆಶಯದಂತೆ ಬಹತ್ವವನ್ನು ಸಂಭ್ರಮಿಸುತ್ತಾ ಸರ್ವ ಜನಾಂಗದವರು ಕೂಡಿ ಬಾಳವಂತಹ ಜೀವನ ಶಿಕ್ಷಣ ನೀಡುವ ಕಾರ್ಯ ಎಲ್ಲಾ ಕಡೆ ನಡೆಯಬೇಕೆಂದು ವಾಣಿಜ್ಯ ತೆರಿಗೆ ಸಲಹೆಗಾರ ಪುಂಡರೀಕಾಕ್ಷ ತಿಳಿಸಿದರು.

ಅವರು ಮುಡಿಪು ಜನ ಶಿಕ್ಷಣ ಟ್ರಸ್ಟ್ ಸ್ಮೈಲ್ ಸ್ಕಿಲ್ ಸ್ಕೂಲ್‌ನಲ್ಲಿ ನಡೆದ ಶನಿವಾರ ಸಂವಾದದಲ್ಲಿ ಭಾಗವಹಿಸಿ ಜೀವನ ಕೌಶಲದೊಂದಿಗೆ ವೃತ್ತಿ ಕೌಶಲ ಪಡೆಯುತ್ತಿರುವ ವಿದ್ಯರ್ಥಿನಿಯರು ಸ್ವ ಉದ್ಯೋಗದೊಂದಿಗೆ ಸೌಹಾರ್ಧ ಸಮಾಜ ನಿರ್ಮಾಣಲ್ಲೂ ಪಾಲುದಾರರಾಗಬಕೆಂದರು. ಅಲ್ಲದೆ ಏಕತ್ವದಿಂದ ಬಹುತ್ವಕ್ಕೆ ಕೊಂಡೊಯ್ಯುವ ಶಿಕ್ಷಣ ಇಂದಿನ ಅಗತ್ಯವೆಂದರು.

ಸಂವಾದ ನಿರೂಪಿಸಿದ ಮನ್ರೇಗಾ ಮಾಜಿ ಒಂಬುಡ್ಸ್ ಮೆನ್ ಎನ್. ಶೀನ ಶೆಟ್ಟಿ ಶನಿವಾರ ಶ್ರಮದಾನ, ಶನಿವಾರ ಸಂವಾದ ಕಾರ್ಯಕ್ರಮ ಮನಸ್ಸು ಮತ್ತು ಶರೀರಕ್ಕೆ ಸಂಸ್ಕಾರ ನೀಡುತ್ತದೆ ಎಂದು ತಿಳಿಸಿದರು. ಸ್ಮೈಲ್ ಸ್ಕಿಲ್ ಸ್ಕೂಲ್ ವಿಧ್ಯಾರ್ಥಿನಿಯರಾದ ಕೌಸರ್ ಭಾನು, ಕುಶೀ, ಫಾತಿಮ ನಸೀದಾ ಶಿಕ್ಷಕಿಯರಾದ ಜನನಿ, ಪ್ರಜ್ನಾ, ಕಾವೇರಿ ಅನುಭವಗಳನ್ನು ಹಂಚಿಕೊಂಡರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article