ಅ.11 ರಂದು ಕಾಪು ಪಿಲಿ ಪರ್ಬ
ಕಾಪು: ರಕ್ಷಣಾಪುರ ಜವನೇರ್ ವತಿಯಿಂದ ಕಾಪು ಪಿಲಿ ಪರ್ಬ, ಸಾಂಸ್ಕೃತಿಕ ವೈಭವ, ಹುಲಿವೇಷ ಸ್ಪರ್ಧೆಯು ಅ.11 ರಂದು ಪಡುಬಿದ್ರಿ ಬಂಟರ ಸಂಘದ ಆವರಣದಲ್ಲಿ ಜರಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ನವೀನ್ ಎನ್.ಶೆಟ್ಟಿ ತಿಳಿಸಿದರು.
ಅವರು ಕಾಪು ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ನವರಾತ್ರಿ ದಸರಾ ಹಬ್ಬದ ಪ್ರಯುಕ್ತ ರಕ್ಷಣಾಪುರ ಜವನೆರ್ ಕಾಪು ಇವರ ವತಿಯಿಂದ ಸೀಸನ್-2 ಕಾಪು ಪಿಲಿ ಪರ್ಬ, ಸಾಂಸ್ಕೃತಿಕ ವೈಭವ ಹುಲಿವೇಷ ಸ್ಪರ್ಧಾ ಕಾರ್ಯಕ್ರಮವು ಅ.11 ರಂದು ಶುಕ್ರವಾರ ಮಧ್ಯಾಹ್ನ 3.30 ರಿಂದ ಕಾಪು ಬಂಟರ ಸಂಘದ ಆವರಣದಲ್ಲಿ ಆರಂಭವಾಗಲಿದೆ.
ಈ ಸ್ಪರ್ಧೆಯಲ್ಲಿ ಪ್ರತಿಷ್ಟಿತ 10 ತಂಡಗಳು ಭಾಗವಹಿಸಲಿದ್ದು, ಕರಾವಳಿ ಗಂಡು ಮೆಟ್ಟಿದ ಕಲೆ ಝೀ ಕನ್ನಡ ಡ್ರಾಮಾ ಜೂನಿಯರ್ಸ್‌ನ ಸೀಸನ್ 4 ರ ವಿಜೇತೆ ಸಮೃದ್ಧಿ ಮೊಗವೀರ ಹಾಗೂ ತಂಡದವರಿಂದ ಯಕ್ಷ ನೃತ್ಯ ರೂಪಕ ನಡೆಯಲಿದೆ. ಕಿನ್ನಿಗೋಳಿ ಕ್ರೀವ್ಸ್ ಇನ್ ಕ್ರೀವ್ ಸ್ಟುಡಿಯೊ ಡ್ಯಾನ್ಸ್ ತಂಡದಿಂದ ನೃತ್ಯ ವೈಭವ ಹಾಗೂ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಚಲನಚಿತ್ರದ ತಂಡ ಉಪಸ್ಥಿತಿ ಮತ್ತು ಶಾಂತಲತ ಶೆಟ್ಟಿ ಬಳಗದ ಕುಣಿತದ ಭಜನೆ ಕಾರ್ಯ ಕ್ರಮ ನಡೆಯಲಿದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಮ್ಮಾನ ನಡೆಯಲಿದೆ.
ಹುಲಿವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 1,00,000 ರೂ. ದ್ವಿತೀಯ ಬಹುಮಾನ 75,000 ರೂ. ತೃತೀಯ ಬಹಿಮಾನ 30,000 ರೂ. ಅಲ್ಲದೇ ಭಾಗವಹಿಸುವ ಎಲ್ಲಾ ತಂಡಗಳಿಗೆ ಪ್ರೋತ್ಸಾಹ ಧನಸಹಾಯ ನೀಡಲಾಗುವುದು, ವಿಶೇಷ ಕರಿ ಹುಲಿ, ಅಕ್ಕಿ ಮುಡಿ ಹಾರಿಸುವುದು, ಅತ್ಯುತ್ತಮ ವೇಷ ಕುಣಿತಕ್ಕೆ ವ್ಯಯಕ್ತಿಕ ಬಹುಮಾನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ನವೀನ್ ಎನ್. ಶೆಟ್ಟಿ, ಗಣೇಶ್ ಕೋಟ್ಯಾನ್, ಕಾರ್ತಿಕ್ ಅಮೀನ್, ಅಶ್ವಿನಿ ಎಂ. ಆಶಾಲತ, ದೇವರಾಜ್ ಅಮೀನ್, ಅಖಿಲೇಶ್ ಕೋಟ್ಯಾನ್, ಸುನಿಲ್ ಅಂಚನ್, ರಮೀಝ್ ಹುಸೈನ್, ಸುದೀರ್, ದೀಪಕ್ ಎರ್ಮಾಳ್ ಉಪಸ್ಥಿತರಿದ್ದರು.