ಡಾ. ಅರುಣ್ ಉಳ್ಳಾಲರ ಮೇಲೆ ಸುಳ್ಳು ಕೇಸು-ಹಿಂದೂ ವಿರೋಧಿ ಕೃತ್ಯ, ತಕ್ಷಣ ಕೇಸು ವಜಾಗೊಳಿಸಲು ಆಗ್ರಹ: ವಿಶ್ವ ಹಿಂದೂ ಪರಿಷದ್
Monday, October 7, 2024
ಮಂಗಳೂರು: ಡಾ. ಅರುಣ್ ರವರು ನೂರಾರು ಧರ್ಮಶಿಕ್ಷಣ ಕಾರ್ಯಕ್ರಮ ಮತ್ತು ರಾಷ್ಟ್ರ ಭಕ್ತಿ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಲ್ಲಿ, ಮಕ್ಕಳಲ್ಲಿ ಧಾರ್ಮಿಕ ರಾಷ್ಟ್ರೀಯ ಚಿಂತನೆಗಳನ್ನು ಮೂಡಿಸಿ, ಹಿಂದೂ ಸಮಾಜವನ್ನು ಜಾಗೃತಿಗೊಳಿಸುವ ಕಾರ್ಯ ಮಾಡುತ್ತಿದ್ದು, ಇದನ್ನು ಸಹಿಸದ ಹಿಂದೂ ವಿರೋಧಿ ರಾಜ್ಯ ಸರಕಾರ, ಹಿಂದುಗಳನ್ನು ಗುರಿಯಾಗಿಟ್ಟುಕೊಂಡು ದ್ವೇಷರಾಜಕಾರಣಕೋಸ್ಕರ ಅವರ ಮೇಲೆ ಸುಳ್ಳು ಕೇಸು ದಾಖಲಿಸಿರುವುದನ್ನು ಬಲವಾಗಿ ಖಂಡಿಸುತ್ತೇವೆ. ತಕ್ಷಣ ಅವರ ಮೇಲೆ ಹಾಕಿರುವ ಕೇಸನ್ನು ತಕ್ಷಣ ವಜಾಗೊಳಿಸಬೇಕೆಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಆಗ್ರಹಿಸಿದರು.