ಡಾ. ಅರುಣ್ ಉಳ್ಳಾಲ್‌ರ ದ್ವೇಷ ಭಾಷಣಕ್ಕೆ ಸಿಪಿಐ ಖಂಡನೆ: ಶೀಘ್ರ ಕ್ರಮ ವಹಿಸುವಂತೆ ಸರಕಾರಕ್ಕೆ ಒತ್ತಾಯ

ಡಾ. ಅರುಣ್ ಉಳ್ಳಾಲ್‌ರ ದ್ವೇಷ ಭಾಷಣಕ್ಕೆ ಸಿಪಿಐ ಖಂಡನೆ: ಶೀಘ್ರ ಕ್ರಮ ವಹಿಸುವಂತೆ ಸರಕಾರಕ್ಕೆ ಒತ್ತಾಯ

ಮಂಗಳೂರು: ಡಾ. ಅರುಣ್ ಉಳ್ಳಾಲ್ ಕಿನ್ಯಾದಲ್ಲಿ ಮಾತನಾಡಿದ ಮಾತುಗಳು ಜನಾಂಗ ದ್ವೇಷಿ ಹಾಗೂ ಅಲ್ಪಸಂಖ್ಯಾತ ಸಂಸ್ಥೆಗಳ ವಿರುದ್ಧವಾಗಿದ್ದು, ಇದರಿಂದ ಕೋಮು ದ್ವೇಷ ಪ್ರಚೋದನೆಗೆ ಕಾರಣವಾಗುವ ಎಲ್ಲಾ ಸಾಧ್ಯತೆಗಳಿವೆ. ಉನ್ನತ ಶಿಕ್ಷಣ ಪಡೆದ ಡಾಕ್ಷರೇಟ್ ವಿದ್ವಾಂಸ ಹಾಗೂ ಪ್ರಾಧ್ಯಾಪಕರಾಗಿರುವ ಇವರ ಈ ನಡತೆ ನಿಜಕ್ಕೂ ಖಂಡನೀಯ. ಅಲ್ಪ ಸಂಖ್ಯಾತ ಶಾಲೆ, ಕಾಲೇಜುಗಳಲ್ಲಿ ಕಲಿತು, ಅಲ್ಲೇ ಪ್ರಾಧ್ಯಾಪಕ ವೃತ್ತಿ ಮಾಡುತ್ತಿರುವ ಇವರ ಕೃತಜ್ಞರಾಗುವ ಬದಲು ಕಿಡಿಕಾರುವ ನಡತೆ ಒಬ್ಬ ಸುಶಿಕ್ಷಿತನೆನೆಸಿಕೊಂಡವರಿಗೆ ಯೋಗ್ಯವಲ್ಲ.

ಭಾರತ ಕಮ್ಯುನಿಸ್ಟ್ ಪಕ್ಷದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ಇವರ ನಡತೆಯನ್ನು ತೀವ್ರವಾಗಿ ಖಂಡಿಸುತ್ತದೆ. ಅವರ ವಿರುದ್ಧವಾಗಿ ಶೀಘ್ರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಿಪಿಐ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ. ಅವರಿಗೆ ರಾಜ್ಯ ಸರಕಾರ ಕೊಡಮಾಡಿದ ಪ್ರಶಸ್ತಿಗಳನ್ನು ಹಿಂಪಡೆಯಬೇಕೆಂದೂ ಸಿಪಿಐ ಪ್ರಕಟಣೆಯಲ್ಲಿ ಆಗ್ರಹಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article