ಸಂಚರಿಸುತ್ತಿದ್ದ ಬಸ್ಸಿನ ಬೆಂಕಿ: ಹೆಜಮಾಡಿಯಲ್ಲಿ ತಪ್ಪಿದ ದುರಂತ
Saturday, October 5, 2024
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಗೇಟ್ ಬಳಿ ಕಳೆದ ರಾತ್ರಿ ತಡೆ ರಹಿತ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಟೋಲ್ ಸಿಬ್ಬಂದಿಗಳು ಸಾರ್ವಜನಿಕ ರೊಂದಿಗೆ ಸೇರಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಅಂತಿಮವಾಗಿ ಅದಾನಿ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಮೂಲಕ ನಡೆಯಲಿದ್ದ ಅವಘಢ ತಪ್ಪಿಸಿದೆ.
ಉಡುಪಿ ಕಡೆಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಮಂಜುನಾಥ ಹೆಸರಿನ ಖಾಸಗಿ ಬಸ್ಸಿನಲ್ಲಿ ಹೆಜಮಾಡಿಯ ಕಿರು ಟೋಲ್ ಗೇಟ್ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಚಾಲಕನ ಗಮನಕ್ಕೆ ಬಂದು ಬಸ್ ನಿಲ್ಲಿಸಿ ಕಾರ್ಯಚರಿಸಲಾಯಿತು. ಬಸ್ಸಿನ ತಾಂತ್ರಿಕ ದೋಷವೇ ಈ ಅವಘಢಕ್ಕೆ ಕಾರಣ ಎನ್ನಲಾಗಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ.