ಕಲ್ಲಡ್ಕ ಶಾಲೆಯ ಸಹೋದರಿ ವಿದ್ಯಾರ್ಥಿನಿಯರು ಎಸ್‌ಜಿಎಫ್ ಇಂಡಿಯಾ ಈಜು ಸ್ಫರ್ಧೆಗೆ ಆಯ್ಕೆ
Saturday, October 5, 2024
ಬಂಟ್ವಾಳ: ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಆಶ್ರಯದಲ್ಲಿ ಮಧ್ಯಪ್ರದೇಶದ ಮಂಡ್ಸೌರುನಲ್ಲಿ ಜರಗಿದ ರಾಷ್ಟ್ರಮಟ್ಟದ ಈಜು ಚಾಂಪಿಯನ್ ಶಿಫ್ 2024ರಲ್ಲಿ ಇಂಡಿವಿಜುವಲ್ ಮೆಡ್ಲೆಯಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾರ್ಥಿನಿಯರು, ಸಹೋದರಿಯರಾದ ಎಸ್.ಜಿ.ಎಫ್ ಇಂಡಿಯಾ ಈಜು ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಶ್ರೀರಾಮ ಪ್ರೌಢಶಾಲೆಯ 9ನೇ ತರಗತಿಯ ಅನರ್ಘ್ಯ ಎ.ಆರ್ 17ರ ವರ್ಷ ಒಳಗಿನ ಹುಡುಗಿಯರ ಈಜು ಸ್ಫರ್ಧೆಯ 400 ಮೀ. ಇಂಡಿವಿಜುವಲ್ ಮೆಡ್ಲೆಯಲ್ಲಿ ಚಿನ್ನ, 200 ಮೀ. ಇಂಡಿವಿಜುವಲ್ ಮೆಡ್ಲೆಯಲ್ಲಿ ಬೆಳ್ಳಿ ಪದಕ ಪಡೆದು ಎಸ್‌ಜಿಎಫ್ ಇಂಡಿಯ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ಅನನ್ಯ ಎ.ಆರ್. 14 ವರ್ಷ ಒಳಗಿನ ಹುಡುಗಿಯರ ಈಜು ಸ್ಪರ್ಧೆಯಲ್ಲಿ 200 ಮೀ ಬಟರ್ ಫ್ಲೈಯಲ್ಲಿ ಚಿನ್ನ ಪಡೆದು ಎಸ್‌ಜಿಎಫ್ ಇಂಡಿಯ ಈಜು ಸ್ಫರ್ಧೆಗೆ ಆಯ್ಕೆ ಯಾಗಿರುತ್ತಾರೆ.
ಇವರು ಬಂಟ್ವಾಳ ತಾಲೂಕು ಪಂಚಾಯತ್‌ನ ಸಿಬ್ಬಂದಿ ಅಶೋಕ ಕುಮಾರ್ ಬರಿಮಾರು ಮತ್ತು ಕೆ.ಪಿ.ಎಸ್.ಸಿ ಮೊಂಟೆಪದವು ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರೋಹಿಣಿ ಪುತ್ರಿಯರಾಗಿದ್ದಾರೆ. ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್‌ಪೆಕ್ಟರ್ ಬಿ.ಕೆ. ನಾಯ್ಕರ ವರ ಶಿಷ್ಯಯರಾಗಿದ್ದು, ಅಲೋಷಿಯಸ್ ವಿವನ್ ಈಜು ಕೊಳದ ಮುಖ್ಯ ತರಬೇತುದಾರರಾದ ಲೋಕರಾಜ್ ವಿಟ್ಲ ಮತ್ತು ಸ್ಯಾಂಜು ಅವರಿಂದ ತರಭೇತಿ ಪಡೆಯುತ್ತಿದ್ದಾರೆ.